ವಿವಿಧ ವರ್ಣಗಳ ನವಿಲಗರಿಯ ಹಾಗೆ ಇಲ್ಲಿಯ ಕಥೆಗಳು ಬಹು ಆಕರ್ಷಣೀಯ, ಹೃದಯ ಮನೋಹಾರಿ ಎಂಬುದು ಸಂಪಾದಕರಾದ ಬೆಟಗೇರಿ ಕೃಷ್ಣಶರ್ಮ ಹಾಗೂ ಜಿ.ಬಿ.ಜೋಶಿ ಹೇಳಿದ್ದು, ಪುಸ್ತಕಕ್ಕೆ ನವಿಲು ಗರಿ ಶೀರ್ಷಿಕೆಯೂ ಆಗಿದೆ. ಟೇಂಗ್ಸೆ ಗೋವಿಂದರಾಯರ ಛಪ್ಪರ್ ಬಂದ್, ಜೆ.ಪಿ.ರಾಜರತ್ನಂ ಅವರ ಅನಿಷ್ಟಕ್ಕೆ ಶನೀಶ್ವರ ಗುರಿ, ಆನಂದ ಕಂದರ ಮಾಲ್ಕೀ ಹಕ್ಕು, ಕೋ.ಶಿ. ಕಾರಂತರ ನಮ್ಮಾಸ್ಟ್ರು ಸತ್ತರು, ರಂ.ಶ್ರೀ.ಮುಗುಳಿ ಅವರ ವಿತಂತು-ವೇಶ್ಯೆ, ವಿ.ಕೃ.ಗೋಕಾಕರ ಹತಭಾಗ್ಯನ ಭಾಗ್ಯ, ಜಡಭರತರ ಡೂಗಜ್ಜನ ಬಹಿಷ್ಕಾರ ಹೀಗೆ ಒಟ್ಟು 10 ಕಥೆಗಳು ಈ ಸಂಕಲನದಲ್ಲಿವೆ.
ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ 1900ರ ಏಪ್ರಿಲ್ 16ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ.. ಕೃಷ್ಣಶರ್ಮರು 12ನೇ ವರ್ಷದವನಿರುವಾಗ ತಂದೆ, 15ನೇ ವರ್ಷಕ್ಕೆ ಅಣ್ಣ ಹಣಮಂತರಾಯ, 18ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೆ ತಮ್ಮ 14ನೇ ವಯಸ್ಸಿನಲ್ಲಿ ವಿಷಮಶೀತ ಜ್ವರ ಹಾಗೂ 15ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. 1928ರಲ್ಲಿ ತುಳಸೀಬಾಯಿಯೊಂದಿಗೆ ಮದುವೆ. ಕೃಷ್ಣಶರ್ಮರು 56 ವಯಸ್ಸಿನವರಿದ್ದಾಗ ಮಗಳು ಹಾಗೂ ಮರು ವರ್ಷವೇ ಪತ್ನಿ ತೀರಿ ಹೋದರು. 5ನೇ ತರಗತಿವರೆಗೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ, ಕಂಪಿಸುವ ಕೈ-ಕಾಲುಗಳೊಂದಿಗೆ 5 ...
READ MORE