‘ಹುಲಿವೇಷ’ ಮೋದೂರು ತೇಜ ಅವರ ಕಥಾ ಸಂಕಲನ. ಕಥನವನ್ನು ಸರಾಗವಾಗಿ ಕಟ್ಟಬಲ್ಲ ಕಲೆಯನ್ನು ಈಗಾಗಲೇ ಕರಗತ ಮಾಡಿಕೊಂಡಿದ್ದಾರೆ. ಬದುಕಿನ ಕ್ರೌರ್ಯಕ್ಕೆ ಸಿಕ್ಕು ಒದ್ದಾಡುವ ಜೀವಜಗತ್ತಿನ ಬವಣೆಯ ಅನನ್ಯ ವಿವರಗಳು ಓದುಗನ ಅಂತರಾಳಕ್ಕೆ ತಳಮಳದ ಅಗ್ನಿಸ್ಪರ್ಶ ಮಾಡುತ್ತವೆ. ಗಡಿಸೀಮೆಯ ಬದುಕಿನ ಬವಣೆಗಳಿಗೆ ಗಡಿ ಎಂಬುದು ಕಾಣದೇ ದಿನವೂ ವಿಸ್ತಾರಗೊಳ್ಳುತ್ತಲೇ ಇರುವುದರ ವಿಷಾದವೂ ಈ ಕಥೆಗಳೊಳಗೆ ಸ್ಥಾಯಿಯಾಗಿದೆ.
ಲೇಖಕ ಮೋದೂರು ತೇಜ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಕರ್ನಾಟಕ -ಆಂಧ್ರ ಗಡಿಭಾಗದ ಮೋದೂರು ಗ್ರಾಮದವರು. ಪ್ರಾಥಮಿಕ -ಪ್ರೌಢ ಶಿಕ್ಷಣವನ್ನು ಮೋದೂರು, ಜಾಜೂರು, ಚಳ್ಳಕೆರೆ, ಹಾಗೂ ಚಿಕ್ಕಮಗಳೂರಿನಲ್ಲಿ ಪೂರ್ಣಗೊಳಿಸಿದ್ದು, ಮೈಸೂರಿನ ಮುಕ್ತ ವಿ.ವಿ.ಯಿಂದ ಎಂ.ಎ ಪದವಿ ಪಡೆದರು. ಕೃತಿಗಳು: ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದೊಂದಿಗೆ ಪ್ರಕಟಿತ ಕವನ ಸಂಕಲನ-‘ಮರದೊಳಗಣ ಕಿಚ್ಚು (2007). ಬುದ್ಧನ ಮೇಲೂ ಯುದ್ಧ’(2010), ಭೂಮಿ ತೂಕದ ಪ್ರೀತಿ(2011), ಅರ್ಧಕ್ಕೆ ನಿಂತ ಚಿತ್ರ (2013), ಹುಲಿವೇಷ ಇವು ಕಥಾ ಸಂಕಲನಗಳು, ವೇದಾವತಿ ತೀರದಲ್ಲಿ (2011) ಹಾಗೂ ತುದಿ ಇರದ ಹಾದಿ-ಇವು ಕಾದಂಬರಿಗಳು, ನಾಡಿನ ವಿವಿಧ ಪತ್ರಿಕೆಗಳು ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ ...
READ MORE