ಹನಿ ಒಡಲ ಜಗದ ಕಥೆಗಳು

Author : ಪರಿಮಳಾ ರಾವ್ ಜಿ.ಆರ್

Pages 168

₹ 120.00




Year of Publication: 2013
Published by: ಪುಣ್ಯ ಪ್ರಕಾಶನ
Address: #2, ಮಾಚೋಹಳ್ಳಿ ಕಾಲೋನಿ, ವಿಶ್ವ ನೀಡಂ ಪೋಸ್ಟ್, ಬೆಂಗಳೂರು-500091

Synopsys

`ಹನಿ ಒಡಲ ಜಗದ ಕಥೆಗಳು’ ಕೃತಿಯು ಜಿ. ಆರ್. ಪರಿಮಳಾರಾವ್ ಅವರ ಕತಾಸಂಕಲನವಾಗಿದೆ. ಕೃತಿಯ ಕುರಿತು ಮುನ್ನುಡಿ ಬರೆದ ಸಾಹಿತಿ ಎಸ್. ಷಡಕ್ಷರಿ ಅವರು ‘ಸವಿವರವಾಗಿ, ಸಚಿತ್ರವಾಗಿ ಏನನ್ನಾದರೂ ಪ್ರಸ್ತುತ ಪಡಿಸುವುದು ಹೇಗೆ ಒಂದು ಕಲೆಯೋ, ಹಾಗೆಯೇ ಸಂಕ್ಷಿಪ್ತವಾಗಿ ಅತ್ಯಂತ ಮಿತಿಯೊಳಗೆ ಅರ್ಥವಂತಿಕೆಯನ್ನು ಹುದುಗಿಸಬಲ್ಲ ಯೋಗ್ಯತೆಯೂ ಒಂದು ಪ್ರತಿಭಾತ್ಮಕವಾದ ದಿವ್ಯ ಕಲೆಯೇ ಸರಿ. ಇಂಥ ಪ್ರತಿಭೆ, ಅರ್ಹತೆ ಹೊಂದಿರುವ ಸಾಹಿತ್ಯ ಶಾರದೆ ಎಂದರೆ ಶ್ರೀಮತಿ ಜಿ.ಆರ್. ಪರಿಮಳಾ ರಾವ್ ಅವರು, ಈ ಮುಂಚೆಯೂ ಅವರ ಹನಿ ಕವಿತೆಗಳು (ಜಪಾನಿ ಮಾದರಿಯ ಹೈಕುಗಳು) ಹಲವು ಕೃತಿಗಳಾಗಿ ಸಾಹಿತ್ಯ ಲೋಕಕ್ಕೆ ಸಂದಿದ್ದು, ಅವುಗಳನ್ನೆಲ್ಲಾ ಓದಿ, ಆಗಾಗ ಮೆಲುಕು ಹಾಕಿ ಸುಖಿಸಿದವಳು ನಾನು. ಏಕೆಂದರೆ ಆ ಹನಿಗವಿತೆಗಳು ಅದ್ಭುತವಾದ ಅರ್ಥ ಪ್ರಪಂಚಕ್ಕೆ ನನ್ನನ್ನು ಒಯ್ದು ಸುಖ ಶಕ್ತಿಯನ್ನು ನೀಡಿದಂತಹವೇ ಆಗಿದ್ದವು. ಈದೀಗ ಅಂತಹುದೇ ಆದ ಸೊಗಸಾದ ಅರ್ಥದ ಬೆಳಕನ್ನು ಗರ್ಭೀಸಿಕೊಂಡಿರುವ ಇವರ ಜಗದೊಡಲ ಹನಿ ಕತೆಗಳು. ಇಲ್ಲಿ ತನಿತನಿಯಾಗಿ ಮನಸ್ಸನ್ನು ಆವರಿಸಿಕೊಳ್ಳಬಲ್ಲವಾಗಿ ಓದುಗ ಆ ಶಕ್ತಿಯೊಂದಿಗೆ ಹೋಗುತ್ತಾನೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಪರಿಮಳಾ ರಾವ್ ಜಿ.ಆರ್
(06 January 1941)

ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ.  ...

READ MORE

Related Books