'ಏಳು ಮಲ್ಲಿಗೆ ತೂಕದವಳು’ ಶರಣಬಸವ ಗುಡದಿನ್ನಿ ಅವರ ಕಥಾಸಂಕಲನವಾಗಿದೆ. ಈ ಕತೆಯಲ್ಲಿ ಬರುವ ವಾದಿರಾಜನ ಗೆಳೆಯ ರಾಘು ಲಿಂಗ ಪರಿವರ್ತನೆಗೆ ಒಳಗಾಗಿ ಜೋಗತಿ ಆಗುವುದು, ವಾದಿರಾಜನ ತಂದೆಯೂ 'ಗೇ' ಆಗಿರುವನು. ಇವರಿಬ್ಬರನ್ನು ಕಂಡು ವಾದಿರಾಜ ನೊಂದಿದ್ದಾನೆ. ರಾಘು ಅದೆಷ್ಟು ಸಂಭ್ರಮದಿಂದ ಜೋಗಿಣಿಯಾಗುವ ಆಚರಣೆಗೆ ಒಳಗಾಗಿದ್ದಾನೆ. ಅವನ ಮಂದಿಯ ಎಲ್ಲಾ ಲೆಕ್ಕಾಚಾರಗಳು ಮಣ್ಣಾಗಿವೆ. ವಾದಿರಾಜನ ತಂದೆಗೆ ಆತನ ಬಯಕೆ ತೀರಿಸಿಕೊಳ್ಳಲು ಅವಕಾಶಗಳು ಇಲ್ಲವಾಗಿವೆ. ಮನೆ ಮಂದಿಯಿಂದ, ಯಾವುದು ಸರಿ-ತಪ್ಪುಗಳ ಚಿಂತನೆಯಲ್ಲಿ ಕೊರಗುತ್ತಿದ್ದಾಗ ರಾಘುವಿನ ತಾಯಿ ಮಲ್ಲವ್ವ ಮಗನ ಬಗ್ಗೆ 'ಹಂಗ ಹಾರಾದ್ರಾಗ ಅದ್ಕ ಸುಖ ಐತೆಂದ್ರ ಅದ್ನ ತಡಿಯಾಕ ನಾನ್ಯಾರು? ನೀನ್ಯಾರು?' ಎಂದು ಹೇಳಿದಾಗ ವಾದಿರಾಜನಿಗೆ ಮನತಟ್ಟುತ್ತದೆ. ತನ್ನ ಅಪ್ಪ ನನ್ನನ್ನು ಮುಕ್ತವಾಗಿ ಬೆಳೆಸುತ್ತ ಪ್ರೀತಿ ತೋರಿಸುತ್ತಿದ್ದ ಆದರೆ ತಂದೆಯ ಬಯಕೆಗಳನ್ನು ಅರಿತು ನೋಡಲಿಲ್ಲ. ಮಲ್ಲವ್ವ ಅರಿವು ನೀಡಿದ್ದನ್ನು ಸ್ವೀಕರಿಸಿದರೂ ತಂದೆಗೆ ಸ್ವಾತಂತ್ರ್ಯ ನೀಡಲು ಬಯಸಿದರೂ ಆತ ತೀರಿ ಹೋಗಿದ್ದ. ವಾದಿರಾಜನ ಕಣ್ಣಿಂದ ಈ ಕಥನ ನಿರೂಪಣೆಗೊಂಡಿದೆ.
ಲೇಖಕ ಶರಣಬಸವ ಕೆ.ಗುಡದಿನ್ನಿ ಮೂಲತಃ ರಾಯಚೂರು ಜಿಲ್ಲೆಯ ಕೆ. ಗುಡದಿನ್ನಿಯವರು. ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಇವರ ಆಸಕ್ತಿಯ ಕ್ಷೇತ್ರ ಕತೆ. ಧಣೇರ ಬಾವಿ ಇವರ ಮೊದಲ ಕಥಾ ಸಂಕಲನ. ಸತತ ಎರಡು ವರ್ಷ ವಿಜಯ ಕರ್ನಾಟಕ ಯುಗಾದಿ ಕಥಾ ಸ್ಪರ್ದೆಯ ಟಾಪ್- 25 ಕತೆಗಳಲ್ಲಿ ಇವರ ಕತೆಗಳು ಸ್ಥಾನ ಪಡೆದಿವೆ. ತಬ್ಬಲಿ ಮರ ಕತೆಗೆ ಸಮತಾ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ದೊರಕಿದೆ. ಉಡದಾರ ಇವರ ಎರಡನೆಯ ಕೃತಿ. ...
READ MORE