ದೆವ್ವದ ಬೆರಳು ಡಾ. ಕೆ. ಶ್ರೀಪತಿ ಹಳಗುಂದ ಅವರ ಐದನೇ ಕೃತಿ, ಈ ಕೃತಿಯಲ್ಲಿ ಒಟ್ಟು ಹತ್ತು ಕಥೆಗಳಿವೆ. ಅವರೇ ಹೇಳುವಂತೆ ಇಲ್ಲಿನ ಕಥೆಗಳು ಯಾವ ಇಸಂಗಳಿಗೆ ಅಂಟಿಕೊಂಡಿಲ್ಲದೆ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಮುಳುಗಡೆಯಿಂದ ಹಿಡಿದು ಮನುಷ್ಯತ್ವದ ಕಡೆಗೆ ವಸ್ತುವಾಗಿರಿಸಿಕೊಂಡಿದೆ. ಗ್ರಾಮೀಣ ಮನಸ್ಸಿನ ಸೂಕ್ಷ್ಮತೆಯೊಂದಿಗೆ ಕಥೆಗಳು ಸಂಬಂಧವಿರಿಸಿಕೊಂಡಿವೆ. ಕೆಲವು ಕಥೆಗಳು, ಇನ್ನೂ ಕೆಲವು ಕಥೆಯಂಥಾ ಕಥೆಗಳು! ಕಾಲೇಜಿನಿಂದ ಕೃಷಿಯನ್ನು ವಸ್ತುವಾಗಿರಿಸಿಕೊಂಡ ಈ ಕಥಾಸಂಕಲನ ಕನ್ನಡ ಕಥಾಲೋಕಕ್ಕೆ ಹೊಸ ಸೇರ್ಪಡೆಯಾಗಿದೆ.
ಡಾ. ಶ್ರೀಪತಿ ಹಳಗುಂದ ಕೆ. ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪಳಗುಂದದವರು. ಎಂ.ಎ. ಪಿಎಚ್.ಡಿ. ಪದವೀಧರಾಗಿರುವ ಅವರು ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯಗಂಗೆ (ಕಾವ್ಯ), ಕಾರಂತರ ಕಾದಂಬರಿಗಳಲ್ಲಿ ಕಲಾವಂತೆಯರು (ವಿಮರ್ಶೆ) ಪ್ರಕಟಿತ ಕೃತಿಗಳು. ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ ಜೀವನ (ಪಿಎಚ್.ಡಿ. ಮಹಾಪ್ರಬಂಧ). ಅವರಿಗೆ ಪಂಡಿತ ಪುಟ್ಟರಾಜ ಸಾಹಿತ್ಯ ಪುರಸ್ಕಾರ ಸಂದಿದೆ. ...
READ MORE