‘ಕ್ಯಾಸಿನೊ’ ಬಸವರಾಜ ಹೊನಗೌಡರ ಕಥಾಸಂಕಲನವಾಗಿದೆ. ಇಲ್ಲಿ ಲೆಕ್ಕಶಾಸ್ತ್ರದ ವಿಚಾರಗಳನ್ನು ತೆಗೆದುಕೊಳ್ಳಲಾಗಿದೆ. ಇಲ್ಲಿ ಕತೆಗಾರರು ಹೆಣೆದಿರುವ ಕತೆಗಳು ವಿಭಿನ್ನ ರೀತಿಯಲ್ಲಿ ಪ್ರಮುಖವೆನ್ನಿಸುತ್ತದೆ. ಕೃತಿಯ ಮುಖಪುಟವು ಕೃತಿಯೊಳಗಿನ ಬರವಣಿಗೆಗಳಿಗೆ ಕನ್ನಡಿಯಂತ್ತಿರುವುದನ್ನು ಕಾಣಬಹುದು. ಮುಖಪುಟವೇ ಕತೆಯ ಒಳವುಗಳನ್ನು ತಿಳಿಸುತ್ತದೆ.
ಬಸವರಾಜ ಹೊನಗೌಡರ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪೂರ ಗ್ರಾಮದವರು. ವೃತ್ತಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮೇಲ್ವಿಚಾರಕರು. ಪ್ರವೃತ್ತಿಯಿಂದ ಅತ್ಯುತ್ತಮ ಓದುಗರು, ಬರಹಗಾರರು. ತಮ್ಮ ಕಚೇರಿಯ ಒತ್ತಡದ ಕೆಲಸ ಕಾರ್ಯಗಳ ಮಧ್ಯೆಯೂ ಸಮಯವನ್ನು ಹೊಂದಿಸಿಕೊಂಡು ಓದುವುದನ್ನು ತಮ್ಮ ಮುಖ್ಯ ಹವ್ಯಾಸವನ್ನಾಗಿ ಮಾಡಿಕೊಂಡವರು. ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕಾವ್ಯ, ಕಾದಂಬರಿಗಳ ಓದುವ ಗೀಳನ್ನು ಬೆಳೆಸಿಕೊಂಡ ಇವರು, ಹಿಂದುಳಿದ ವರ್ಗಗಳ ಮಕ್ಕಳ ವಸತಿ ನಿಲಯದಲ್ಲಿನ ಮಕ್ಕಳೊಂದಿಗೆ ಸದಾ ಬೆರೆಯುತ್ತ ತಮ್ಮ ಜ್ಞಾನ ಸಂಪಾಧನೆಯ ಸಂಪತ್ತನ್ನು ಮಕ್ಕಳಿಗೆ ಧಾರೆ ಎರೆಯುತ್ತ ಅವರ ದೈಹಿಕ, ಭೌದ್ಧಿಕ," ಸಾಮಾಜಿಕ, ಸಂವೇಧನಾತ್ಮಕ ವಿಕಾಸಕ್ಕೆ ...
READ MORE