ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲ. ಅಮರ ಜಾತಕ ಕಥೆಗಳು ಜಗತ್ತಿನೆಲ್ಲೆಡೆ ಪ್ರಸಿದ್ಧಿಯಾಗಿದ್ದು, ಇಲ್ಲಿಯ ಕಥೆಗಳು ನೀತಿ ಬೋಧೆಗಳು. ಜೀವನ ಮಾರ್ಗದರ್ಶಿಗಳು. ಬದುಕಿನ ಸಾರ್ಥಕತೆಯನ್ನು ಹೇಳುವಂತಹವು. ನಮ್ಮ ಸಂತೋಷವು ಇತರರನ್ನು ತೃಪ್ತಿಪಡಿಸುವುದರಲ್ಲಿದೆ ಎಂದು ಸೂಚಿಸುವಂತಹವು. ಬುದ್ಧನ ಜಾತಕ ಕಥೆಗಳಲ್ಲಿ ಬರುವ ಅಂಗುಲೀಮಾಲ ಕಥೆಯು ಇನ್ನೊಬ್ಬರೆಡೆಗೆ ಕರುಣೆ ತೋರುವುದರಿಂದ, ಪ್ರೀತಿಯಿಂದ ಮಾತನಾಡುವುದರಿಂದ ಎಂತಹ ಕಟುಕ ಹೃದಯವೂ ಕರಗುತ್ತದೆ. ಮಾನವೀಯತೆಯನ್ನು ಪ್ರೀತಿಸುತ್ದೆ ಎಂಬುದಕ್ಕೆ ಅಂಗುಲೀಮಾಲ ಕಥೆ ಸಂದೇಶ ನೀಡುತ್ತದೆ. ಇಂತಹ ಕಥೆಗಳುಳ್ಳ ಸಂಕಲನವಿದು. ಈ ಕೃತಿಯು 14 ಶೀರ್ಷಿಕೆಗಳಾದ, ಕರುಣೆಯೇ ಧರ್ಮದ ಆಧಾರಸ್ತಂಭ, ಕೇಳಿರೆಲ್ಲ ಜ್ಞಾನಕ್ಕಿಂತ ಶೀಲವೇ ಮಿಗಿಲು, ಮೈತ್ರಿ ಮಹಾನದಿ ಶೋಭೆಯ ಗೆಲ್ಲಿರೆಲ್ಲ, ಅಕನೇ ಕೇಳ್ ಜಾತಿಭ್ರಷ್ಟರು ಎಂದರೆ ಯಾರು, ಎಲ್ಲಕ್ಕೂ ಮನಸ್ಸೇ ಮೂಲ ಮನಸ್ಸೇ ಮಾರ್ಗದಾತ, ಈ ದುಃಖ ಈ ಸಾವಿಗೆ ಕಾರಣರಾರೆಂದ ಮಹಾಕಪ, ಹೆಣ್ಣು ಸದಾ ಪ್ರಾಜಳು ಜರಿಯದಿರೆಂದ ಬುದ್ಧ, ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲ, ಶೀಲದಿಂದಲೇ ಪ್ರಜೆಯ ಸದ್ಬಳಕೆ, ಏಕಾಂಗಿಯಾದರೂ ಸತ್ಯಕ್ಕೆ ಕೈ ಎತ್ತಿ, ಹಸಿದವಗೆ ಅನ್ನ ಮೊದಲು ಧರ್ಮ ನಂತರ, ಮರಳಿ ಜೀವ ಕೊಡುವುದಾದೊಡೆ ಕೊಲ್ಲು, ಅಪರಾಧ ಸ್ವಯಂಕೃತ ನಗೆಪಾಟಲು ಬ್ರಹ್ಮಂಗೆ ಏಕೆ, ಬುದ್ಧ ಮೋಹ ನಿರ್ಮೋಹಗಳ ಸಂಘರ್ಷವೇ ಧರ್ಮಯುದ್ಧವೆಂದ ಇವೆಲ್ಲವುಗಳನ್ನು ಒಳಗೊಂಡಿರುತ್ತದೆ.
ಕವಯತ್ರಿ ಎಚ್. ವಿಧಾತ್ರಿ ರವಿಶಂಕರ್ ಅವರು ಮೂಲತಃ ಕುಂದಾಪುರದವರು. ಪ್ರಸ್ತುತ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ಧಾಪುರದ ಸರಸ್ವತಿ ವಿದ್ಯಾಲಯದಲ್ಲಿ ಮೂರನೇ ಕ್ಲಾಸಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೃತಿಗಳು: ಗುಬ್ಬಚ್ಚಿ ...
READ MORE