ಭವರಿ

Author : ಬಿ.ಜೆ. ಪಾರ್ವತಿ.ವಿ. ಸೋನಾರೆ

Pages 112

₹ 100.00




Year of Publication: 2017
Published by: ಕನ್ನಡ ನಾಡು ಪ್ರಕಾಶನ
Address: ಪ್ರಕಾಶನದ ಹೆಸರು-- ಕನ್ನಡ ನಾಡು ಪ್ರಕಾಶನ . ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ ಜಿ ೨ ವಿವಿ ಹಾಸ್ಟೆಲ್ ಕಾಂಪ್ಲೆಕ್ಸ್ , ಸೇಡಂ ರಸ್ತೆ , ಕಲಬುರ್ಗಿ- ೫೮೫೫೮೫೧೦೫.
Phone: 9008497260

Synopsys

ಕಲಬುರ್ಗಿ ವಿಶ್ವ ವಿದ್ಯಾಲಯವು ಪ್ರತಿ ವರ್ಷ ರಾಜ್ಯೋತ್ಸವ ಅಂಗವಾಗಿ ಕೊಡ ಮಾಡುವ "ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ " ಪ್ರಶಸ್ತಿಯನ್ನು ,ರಾಜ್ಯ ಮಟ್ಟದ ಕಥಾ ಸ್ಪರ್ಧೆ ೨೦೧೬ ರಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ ಕಥೆ "ಭವರಿ" . ಹೆಣ್ಣು ಮನೆಯ ಒಳಗೆ ಮತ್ತು ಹೊರಗೆ ಅನುಭವಿಸುವ ಲೈಂಗಿಕ ಕಿರುಕೂಳಗಳ ಸುತ್ತ ಮುತ್ತ ಹೆಣೆದ ಅದ್ಭುತ ಕಥೆಗಳ ಗುಚ್ಚವೇ ಭವರಿ. ಮೈ ನವಿರೇಳಿಸುವಂಥ ಈ ಕಥೆಗಳನ್ನು ಓದುತ್ತಾ ಹೋದಾಗ ಈ ರೀತಿಯ ಗಂಡಸರೂ ಜಗತ್ತಿನಲ್ಲಿ ಇದ್ದಾರಾ? ಅನ್ನುವ ಪ್ರಶ್ನೆ ಮೂಡುತ್ತದಲ್ಲದೆ . ಹೆಣ್ಣು ಏನೆಲ್ಲನ್ನು ಸುಮ್ಮನೆ ಸಹಿಸುತ್ತಿದ್ದಾಳಲ್ಲ? ಯಾಕೆ ಪ್ರತಿಭಟಿಸುತ್ತಿಲ್ಲ ? ಎಂದನಿಸುತ್ತದೆ . ತಂದೆ ತನ್ನ ಸ್ವಂತ ಮಗಳನ್ನು ಹೆಂಡತಿಯಂತೆ ನಡೆಸಿಕೊಳ್ಳುವಂಥ ಅಸಹ್ಯ , ನವ ಮಾಸಗಳ ಕಾಲ ಹೊತ್ತು ಹೆತ್ತು ಹಾಲುಣಿಸಿದ ತಾಯಿಯ ಕುಪ್ಪಸಕ್ಕೆ ಕೈ ಹಾಕುವಂಥ ವಿಕೃತ ಮನಸ್ಸಿನ ಮಗ ಇದೆಲ್ಲವನ್ನು ಸಹಿಸಿಕೊಂಡಿರುವ ಹೆಣ್ಣಿನ ಅಸಹಾಯಕತೆಯ ನೆನೆದು ಕಣ್ಣೀರಾಗಿಸುವ , ಚಿಂತನೆಗೆ ಹಚ್ಚುವ ಕಥೆಗಳನ್ನು ನಾವಿಲ್ಲಿ ಕಾಣುತ್ತೇವೆ . ಜೊತೆಗೆ ತಮ್ಮ ಸ್ವಾರ್ಥಕ್ಕಾಗಿ , ಮೋಜು ಮಸ್ತಿಗಾಗಿ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಏನು ಮಾಡಲೂ ಹೇಸದ ಹೆಂಗಸರೂ ನಮ್ಮ ನಡುವೆ ಇದ್ದಾರೆ ಎಂದು ಹೇಳುವ ಕಥೆ, ಜಗತ್ತನ್ನರಿಯುವ ಮುನ್ನವೇ ಇವನೇ ನಿನ್ನ ಗಂಡನೆಂದು ಹಂಗಿಸಿ ಹಂಗಿಸಿ , ಪುಟ್ಟ ಪೋರಿಯ ಕಂಗಳಲ್ಲಿ ಮದುವೆಯ ಚಿತ್ತಾರಗಳನ್ನು ಬಿಡಿಸಿ ,ಕೊನೆಗವಳ ಕನಸುಗಳನ್ನು ನುಚ್ಚು ನೂರು ಮಾಡಿ , ಆ ಮುಗ್ಧೆಯ ಬಣ್ಣದ ಬದುಕಿಗೆ ಬೆಂಕಿ ಹಚ್ಚಿ, ಅವಳ ಸಮಾಧಿಯ ಮೇಲೆ ಸಮಂಜೋತ ಮಾಡಿಕೊಳ್ಳುವಂತಹ ವ್ಯವಸ್ಥೆಯ ಕಥೆಯೂ ಇಲ್ಲಿದೆ ಒಟ್ಟಾರೆ ಹೇಳಬೇಕೆಂದರೆ ಎಲ್ಲರೂ ಓದಲೇಬೇಕಾದ ಕಥಾ ಸಂಕಲನ ಈ ಭವರಿ.

About the Author

ಬಿ.ಜೆ. ಪಾರ್ವತಿ.ವಿ. ಸೋನಾರೆ

ಬಿ.ಜೆ. ಪಾರ್ವತಿ. ವಿ. ಸೋನಾರೆ ಅವರು ಮೂಲತಃ  ಇವರು  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣದ ಹತ್ತಿರವಿರುವ ಕೊಂಕಣಗಾಂವ ಎಂಬ ಗ್ರಾಮದವರು . ತಂದೆ ಜಟಿಂಗರಾಯ ಡಫಳಾಪೂರ ತಾಯಿ ಭೀಮಬಾಯಿ ಡಫಳಾಪೂರ.  ವಿಜಯ ಕುಮಾರ ಸೋನಾರೆಯವರ ಕೈಹಿಡಿದು  ಬೀದರಿನ ವಿಜಯಕಾಲೋನಿಯ ನೆಲೆಸಿದ್ದಾರೆ.  ಇವರು ಅನೇಕ  ನಾಟಕ, ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.   ಸಂದ ಪ್ರಶಸ್ತಿ ಪುರಸ್ಕಾರ ,ಸನ್ಮಾನಗಳು ಅನೇಕ. 2011 ರಲ್ಲಿ “ ದ ಬ್ಲೆಂಡ್‌ ಫೇತ್‌” ಕಿರುಚಿತ್ರದ ನಟನೆಗಾಗಿ "excellent actor" ಎಂಬ ಪ್ರಶಸ್ತಿ ದೊರೆತಿದೆ. 2016 ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಕಲಬುರ್ಗಿ ವಿ.ವಿ. "ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ...

READ MORE

Related Books