‘ಆರು ಎಸೆತಗಳು' ರಕ್ಷಿತ್ ತೀರ್ಥಹಳ್ಳಿ ಅವರ ಮಲೆನಾಡಿನ ಕುರಿತ ವಿಚಾರಧಾರೆಗಳುಳ್ಳ ಕಥಾಸಂಕಲನವಾಗಿದೆ. ಅವರು ತಮ್ಮ ಮೊದಲ ಹೊತ್ತಗೆ 'ಕಾಡಿನ ನೆಂಟರು'ವಿನಲ್ಲಿ ಮಲೆನಾಡ ಗಂಭೀರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಈಗ ತಮ್ಮ ಈ ಎರಡನೇ ಹೊತ್ತಗೆಯಲ್ಲಿ ಮನುಜನ ಬಾವನೆಗಳ ಸುತ್ತಾ ಮಲೆನಾಡ ಕತೆಗಳನ್ನ ಹೇಳಿದ್ದಾರೆ. 'ವೆನಿಲ್ಲಾ' ಕತೆ ಮಲೆನಾಡಿಗೆ ಹೀಗೆ ಬಂದು ಹಾಗೆ ಹೋದ ವೆನಿಲ್ಲಾ ಕಾಲವನ್ನು ದಾಖಲು ಮಾಡಿದಂತ್ತಿದೆ. 'ರೈಟ್ ರೈಟ್' ಕತೆಯು ನಮ್ಮನ್ನು ಮಲೆನಾಡಿನ ಬಸ್ಸುಗಳಲ್ಲಿ ಪಯಣಿಸುವಂತೆ ಮಾಡುತ್ತದೆ. ಹಾಗೂ ಕಾಲೇಜಿನ ಹಳೆಯ ದಿನಗಳನ್ನು ಮೆಲುಕು ಹಾಕಿಸುವಂತೆ ಓದುಗನನ್ನು ಮಗ್ನಗೊಳಿಸುತ್ತದೆ.
ರಕ್ಷಿತ್ ತೀರ್ಥಹಳ್ಳಿ ತೀರ್ಥಹಳ್ಳಿ ಮೂಲದವರು. ಖ್ಯಾತ ಸಿನಿಮಾ ನಿರ್ದೇಶಕ, ಯುವ ಬರಹಗಾರರು. ಕೃತಿ : 'ಕಾಡಿನ ನೆಂಟರು' ...
READ MORE