ಬಿ. ಸುರೇಂದ್ರ ರಾವ್ ಅವರು ಸಂಪಾದಿಸಿರುವ ಕೃತಿ ವಿವೇಕಾನಂದ ಸಮಾಜಮುಖಿ ಚಿಂತಕ. ಈ ಕೃತಿಯಲ್ಲಿ ಕುವೆಂಪು, ಕೆ.ಎಸ್. ಭಗವಾನ್ ಹಾಗೂ ಎ.ಎಮ್.ಎಸ್. ನಂಬೂದರಿಪಾಡ್ ಅವರ ತಿಳಿದ ವಿವೇಕಾನಂದ ಬಗ್ಗೆ ಆಯ್ದ ತುಣುಕನ್ನು ಬೆನ್ನುಡಿಯಲ್ಲಿ ಹಾಕಲಾಗಿದೆ. ಕೆ.ಎಸ್. ಭಗವಾನ್ ಅವರು ಹೇಳುವಂತೆ, ವಿವೇಕಾನಮದರು ಎಂಥ ವಿಚಾರವಂತ, ಬಂಡಾಯಗಾರ, ಕ್ರಾಂತಿಕಾರಿ ಎಂದು ಗೊತ್ತಾಗಬೇಕಾದರೆ ಅವರ ಕೃತಿಗಳನ್ನು ತೆರೆದ ಮನಸ್ಸಿನಿಂದ ಓದಬೇಕು. ಅವರು ಹಿಂದೂ ಧರ್ಮದ ವಕ್ತಾರ ಎಂಬ ಪ್ರಚಾರದ ಥಳುಕಿನ ತೆರೆಯನ್ನು ಹರಿದು, ಅವರಿಗೆ ತೊಡಿಸಿರುವ ಹಿಂದೂ ಮಖವಾಡವನ್ನು ಒಡೆದು ನೋಡಬೇಕು ಎಂಬುದಾಗಿ ಹೇಳಿದ್ದಾರೆ.
ಲೇಖಕ ಬಿ. ಸುರೇಂದ್ರ ರಾವ್ ಅವರು ಇತಿಹಾಸ ಸಂಶೋಧಕರು ಹಾಘೂ ಪ್ರಾಧ್ಯಾಪಕರು. ಪುತ್ತೂರಿನ 1968ರಲ್ಲಿ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಪದವೀಧರರು. 1970ರಲ್ಲಿ ಮೈಸೂರು ವಿಶ್ವವಿದ್ಯಾನಿಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1976ರಲ್ಲಿ ಪ್ರೊಫೆಸರ್ ಫೇಕ್ ಅಲಿಯವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪೂರ್ಣಗೊಳಿಸಿದರು. ಮೈಸೂರಿನ ಮಾನಸಗಂಗೋತ್ರಿಯ ಜೂನಿಯರ್ ರಿಸರ್ಚ್ ಪೋಸ್ಟ್ ಗ್ರ್ಯಾಜುಯೇಚ್ ಡಿಪಾರ್ಟ್ಮೆಂಟ್ ನಲ್ಲಿ 1970-1972ರವರೆಗೆ ಜವಾಹರ ಲಾಲ್ ನೆಹರು ಯೋಜನೆಯ ಸಂಶೋಧನ ಸಹಾಯಕರಾಗಿ ಸೇವೆಸಲ್ಲಿಸಿದರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಲೀಡರ್ ಆಗಿ 1982-1993ರವರೆಗೆ ಸೇವೆಸಲ್ಲಿಸಿ, ಆನಂತರ ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು. ಇವರ ಮಾರ್ಗದರ್ಶನದಲ್ಲಿ 12 ಜನ ...
READ MORE