ಬೈಂದೂರು ಚಂದ್ರಶೇಖರ ನಾವಡ ಅವರ ಕೃತಿ ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್. ಜನರಲ್ ಬಿಪಿನ್ ರಾವತ್ ಅವರು ಸೈನಿಕರ ಹಿಂದೆ ಸ್ಫೂರ್ತಿಯ ಸೆಲೆಯಾಗಿದ್ದರು. ಕಮಾಂಡರುಗಳಿಗೆ ಮತ್ತು ರಾಜಕೀಯ ನೇತೃತ್ವಕ್ಕೆ ಅನುಭವದ ಆಸರೆ ನೀಡಿದರು. ಸೈನಿಕರ ಕುಟುಂಬಸ್ಥರಿಗೂ ಧೈರ್ಯ ತುಂಬಿದರು. ಯುವ ಜನಾಂಗಕ್ಕೆ ದೇಶಪ್ರೇಮದ ಪಾಠ ಮಾಡಿದರು. ಸ್ವಾರ್ಥ ರಾಜಕಾರಣದಲ್ಲಿ ತೊಡಗಿದ್ದ ರಾಜಕಾರಣಿಗಳಿಗೆ ಮಾತಿನ ಚಾಟಿ ಏಟು ಕೊಟ್ಟರು. ದೇಶದ ಸಾಮಾನ್ಯ ಜನತೆಯೂ ಅವರನ್ನು ಪ್ರೀತಿಸಿದರು. ಅವರ ಅಕಾಲಿಕ ಮೃತ್ಯುವಿನಿಂದ ದೇಶಕ್ಕೆ ದೇಶವೇ ಕಣ್ಣೀರಿಟ್ಟಿತು. ಸೇನಾ ಮುಖ್ಯಸ್ಥರಾಗಿ ಹಾಗೂ ಮೂರೂ ಸಶಸ್ತ್ರಪಡೆಗಳ ಮೊದಲ ಮುಖ್ಯಸ್ಥರಾಗಿ ಜ. ಬಿಪಿನ್ ರಾವತ್ ಅವರ ಕಾರ್ಯ ಸೈನ್ಯ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರುವುದರಲ್ಲಿ ಸಂದೇಹವಿಲ್ಲ. ಸೈನ್ಯ ತರಬೇತಿಯಲ್ಲೇ ಸರ್ವೋತ್ತಮ ಕ್ಯಾಡೆಟ್‌ಗೆ ದಕ್ಕುವ `ಸೋರ್ಡ್ ಆರ್ಫ ಆನರ್’ ಪಡೆದ ಬಿಪಿನ್ ರಾವತ್ ನಾಲ್ಕು ದಶಕಗಳ ಸುದೀರ್ಘ ಸೇವೆಯಲ್ಲಿ ಪ್ರತಿಯೊಂದು ಹಂತದಲ್ಲೂ ಶ್ರೇಷ್ಠತೆಯನ್ನು ಮೆರೆದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಫೀಲ್ಡ್ ಮಾರ್ಷಲ್ ಮಾಣಿಕ್ ಶಾ, ಜನರಲ್ ತಿಮ್ಮಯ್ಯರಂತೆ ಸೈನ್ಯ ಅಕಾಡೆಮಿಗಳಲ್ಲಿ ತರಬೇತಿ ಪಡೆಯುವ ಯುವ ಅಧಿಕಾರಿಗಳಿಗೆ ಮತ್ತು ಸೇನಾಧಿಕಾರಿಯಾಗುವ ಹಂಬಲ ಹೊಂದಿದ ಯುವಕರಿಗೆ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರೂ ಸ್ಫೂರ್ತಿಯ ಸೆಲೆಯಾಗಿ ಚಿರಕಾಲ ಉಳಿಯಲಿರುವರು. ಯೋಧರಷ್ಟೇ ಅಲ್ಲದೇ ದೇಶದ ಹಿತ ಚಿಂತಿಸುವ ಜನಮಾನಸದಲ್ಲೂಅವರು ಶಾಶ್ವತವಾಗಿ ನೆಲೆನಿಲ್ಲಲಿರುವರು.ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಜ. ಬಿಪಿನ್ ರಾವತ್ ಅವರ ಜೀವನಚರಿತ್ರೆ - ಸಾಧನೆಯ ಪಥವನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನದ ಫಲ ಈ ಕೃತಿ. ಈ ಪುಸ್ತಕಕ್ಕೆ ಕರ್ನಲ್ (ನಿವೃತ್ತ) NS ಭಂಡಾರಿ ಅವರ ಮುನ್ನುಡಿ ಬರೆದಿದ್ದಾರೆ ಹಾಗೂ ಕುಂದಪ್ರಭ ಸಂಪಾದಕ ಹಿರಿಯ ಪತ್ರಕರ್ತ ಶ್ರೀ ಯು ಎಸ್ ಶೆಣೈ ಅವರ ಬೆನ್ನುಡಿ ಇದೆ.
ಕೃತಿಯ ಪರಿವಿಡಿಯಲ್ಲಿ ಸೈನ್ಯ ಪರಂಪರೆಯ ಹಿನ್ನೆಲೆ, ವೃತ್ತಿ ಬದುಕಿನ ಪ್ರಾರಂಭದ ದಿನಗಳು , ಆಫ್ರಿಕಾದ ಕಾಂಗೋದಲ್ಲಿ , ಜನರಲ್ ಆಫಿಸರ್ ಕಮಾಂಡಿಂಗ್ (GOC), ಸೇನೆಯ ಮುಂಚೂಣಿಯ ನಾಯಕತ್ವ , ಡೋಕ್ಲಾಮ್ ಬಿಕ್ಕಟ್ಟು , ಅಪರೇಷನ್ ಜುನಿಪರ್, ಕೋಲ್ಡ್ ಸ್ಟಾರ್ಟ್ ಸಿದ್ಧಾಂತ, ಏಕಕಾಲದಲ್ಲಿ ಎರಡು ರಣಕ್ಷೇತ್ರದ ಯುದ್ಧದ ರಣನೀತಿ, ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿ , ಲಡಾಕ್ ಬಿಕ್ಕಟ್ಟು ನಿರ್ವಹಣೆ , ಕೌಟುಂಬಿಕ ಬದುಕು , ಏಕೀಕೃತ ಕಮಾಂಡ್ ರಚನೆಯತ್ತ, ಅತ್ಯುತ್ತಮ ಯೋಧ, ಕೆಚ್ಚೆದೆಯ ಜನರಲ್ , ಫೀಲ್ಡ್ ಮಾರ್ಷಲ್ ಸ್ಯಾಮ್ ಅವರ ಪ್ರಭಾವ, ಕೊಡಗಿನ ಮೇಲಿನ ಪ್ರೀತಿ , ವೀರ ವನಿತೆಗೆ ಗೌರವ , ಅಪ್ರತಿಮ ದೇಶಪ್ರೇಮ , ಪಡೆದ ಗೌರವಗಳು ಮತ್ತು ಪದಕಗಳು , ವಿದೇಶ ಭೇಟಿ , ನಮನಗಳು ಮಹಾನ್ ಸೇನಾನಿಗೆ ಎಂಬ ಶೀರ್ಷಿಕೆಗಳಿವೆ.
ಬೈಂದೂರು ತಾಲೂಕಿನ ಯಡ್ತರೆ ಗ್ರಾಮದಲ್ಲಿ ದಿ. ರಾಮನಾವಡ ಮತ್ತು ದಿ. ಗೋದಾವರಿ ಅವರ ಪುತ್ರನಾಗಿ 10-09-1965ರಲ್ಲಿ ಜನಿಸಿದರು . 1990ರಲ್ಲಿ ಆರ್ಮಿ ಎಜುಕೇಶನಲ್ ಕೋರ್ ಗೆ ಬೋಧಕರಾಗಿ ಸೇವೆ ಪ್ರಾರಂಭಿಸಿದರು. ಭಾರತೀಯ ಸೇನೆಯ 22 ವರ್ಷದ ಸೇವಾವಧಿಯಲ್ಲಿ ಉಗ್ರವಾದಗ್ರಸ್ತ ಜಮ್ಮು ಕಾಶ್ಮೀರದ ಉಚ್ಚತುಂಗ ಪ್ರದೇಶಗಳಲ್ಲೂ, ಸೇನೆಯ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಾದ ಆರ್ಮಿ ಎಜುಕೇಶನಲ್ ಕೋರ್ ಟ್ರೈನಿಂಗ್ ಕಾಲೇಜ್ ಪಚಮಡಿ (ಮಧ್ಯಪ್ರದೇಶ.) ಮತ್ತು ಆರ್ಟಿಲರಿ ಟ್ರೈನಿಂಗ್ ಸೆಂಟರ್ ಹೈದರಾಬಾದ್‍ನಲ್ಲೂ ಸೇವೆ ಮಾಡಿ ಜಮ್ಮು ಕಾಶ್ಮೀರದಲ್ಲಿ `ಅಪರೇಶನ್ ರಕ್ಷಕ್’ ಮತ್ತು ಕಾರ್ಗಿಲ್ ಸಂಘರ್ಷದ `ಅಪರೇಶನ್ ವಿಜಯ್’ ದಲ್ಲಿ ಸಕ್ರಿಯವಾಗಿ ಕರ್ತವ್ಯ ...
READ MORE