ಎಸ್. ಕಾಳಪ್ಪ

Author : ಎಲ್. ಶಿವಲಿಂಗಪ್ಪ

Pages 56

₹ 40.00




Year of Publication: 2004
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002
Phone: 080-22480297

Synopsys

‘ಎಸ್. ಕಾಳಪ್ಪ’ ಲೇಖಕ ಎಲ್. ಶಿವಲಿಂಗಪ್ಪ ಅವರು ರಚಿಸಿರುವ ಕೃತಿ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಜನಪ್ರಿಯ ಕಲಾಮಾಲಿಕೆಯಲ್ಲಿ ಪ್ರಕಟವಾಗಿರುವ ಈ ಕೃತಿ ಕಲಾವಿದರಾದ ಎಸ್. ಕಾಳಪ್ಪನವರ ಕಲಾಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. ಕಲೆ ಮತ್ತು ಜನಸಾಮಾನ್ಯರ ನಡುವೆ ಸೇತುವೆಯಾಗುವ ನಿಟ್ಟಿನಲ್ಲಿ ಕಲಾವಿದರ ಬದುಕಿನ ಕುರಿತಾದ ಮಾಹಿತಿಗಳನ್ನು ಈ ಮಾಲಿಕೆಯಲ್ಲಿ ಪ್ರಕಟವಾದ ಎಲ್ಲ ಪುಸ್ತಕಗಳನ್ನು ಒಳಗೊಂಡಿವೆ. ಅದರಂತೆಯೇ ಕಲಾವಿದ ಎಸ್. ಕಾಳಪ್ಪ ಅವರ ಬದುಕು ಕಲಾ ಸಾಧನೆಯ ಮಾಹಿತಿಗಳನ್ನು ಈ ಕೃತಿ ಒಳಗೊಂಡಿದೆ.

About the Author

ಎಲ್. ಶಿವಲಿಂಗಪ್ಪ

ಮೈಸೂರಿನಲ್ಲಿ 1947ರಲ್ಲಿ ಜನಿಸಿದ ಎಲ್. ಶಿವಲಿಂಗಪ್ಪ ಅವರು ಮೈಸೂರು ಅರಮನೆಯ ಖ್ಯಾತ ಕಲಾವಿದ, ಶಿಲ್ಪ ಸಿದ್ದಾಂತಿ ಸಿದ್ದಲಿಂಗಸ್ವಾಮಿ ಅವರಿಂದಲೇ ಪ್ರಾಥಮಿಕ ಹಂತದ ಚಿತ್ರಕಲಾಭ್ಯಾಸ ಮಾಡಿದವರು. 1966ರಲ್ಲಿ ಬೆಂಗಳೂರಿಗೆ ಬಂದ ನಂತರ ಎಂ.ಟಿ.ವಿ. ಆಚಾರ್ಯರ ಕಲಾಶಾಲೆಯಲ್ಲಿ ಕ್ರಮಬದ್ಧ ಶಿಕ್ಷಣ ಹಾಗೂ ಪದವಿ ಪಡೆದರು. ಚಿತ್ರ-ಶಿಲ್ಪ ಎರಡೂ ಕ್ಷೇತ್ರಗಳಲ್ಲಿ ಹಲವಾರು ಪ್ರಯೋಗ ಮಾಡಿರುವ ಶ್ರೀಯುತರು ನಾಲ್ಕು ಏಕವ್ಯಕ್ತಿ ಪ್ರದರ್ಶನಗಳಲ್ಲದೆ ಹಲವಾರು ಗುಂಪು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. 1997 - 2000 ರಲ್ಲಿ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿದ್ದು, ಮರಳಚ್ಚಿನಲ್ಲಿ (Sand cast) ಹಾಗೂ ಥರ್ಮೊಕೋಲ್‌ಗಳಲ್ಲಿ ಶಿಲ್ಪ ರಚಿಸುವ ಬಗ್ಗೆ ಹಲವಾರು ಯಶಸ್ವಿ ಪ್ರಯೋಗಗಳನ್ನು ಮಾಡಿದ್ದಾರೆ. ...

READ MORE

Related Books