ನನ್ನ ಬದುಕಿನ ಪುಟಗಳಿಂದ

Author : ಗವೀಶ ಹಿರೇಮಠ

Pages 130

₹ 100.00




Published by: ಸಂಗಮೇಶ್ವರ ಮಹಿಳಾ ಮಂಡಲ
Address: ಕಲಬುರಗಿ

Synopsys

‘ನನ್ನ ಬದುಕಿನ ಪುಟಗಳಿಂದ’ ಕೃತಿಯು ವೃತ್ತಿ ರಂಗಭೂಮಿ ಕಲಾವಿದೆ ಅನ್ನಪೂರ್ಣ ಸಾಗರ ಅವರ ಆತ್ಮಚರಿತ್ರೆ. ಲೇಖಕ ಗವೀಶ ಹಿರೇಮಠ ರಚಿಸಿದ್ದಾರೆ. ಈ ಕೃತಿಯಲ್ಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಕೆಲ ನಮ್ಮಲ್ಲಿ ಹೆಣ್ಣುಮಕ್ಕಳು ಆತ್ಮಕಥೆಯನ್ನು ಮುಕ್ತವಾಗಿ ಬರೆಯಲು ಹಿಂಜರಿಯುವ ಹಾಗೂ ಆತ್ಮಕಥೆಗಳೇ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಅನ್ನಪೂರ್ಣರ ಆತ್ಮಚರಿತ್ರೆ ಕುತೂಹಲಕರವಾಗಿದೆ. ಬಣ್ಣದ ಬದುಕನ್ನೇ ನಂಬಿ ಬದುಕುವವರ ಜೀವನ ಸಾಮಾನ್ಯವಾದುದಲ್ಲ. ಇಂಥ ಸಂದರ್ಭದಲ್ಲಿ ಹೆಣ್ಣೊಬ್ಬಳು ಹಾದು ಬಂದ ದಾರಿ ಸರಳರೇಖೆಯಿಂದೇನೂ ಇರುವುದಿಲ್ಲ. ಇಂಥದ್ದರಲ್ಲಿ `ಎಚ್ಚರ ತಂಗಿ ಎಚ್ಚರ‘ ಎಂಬ ನಾಟಕದಿಂದ ಮನೆಮಾತಾದ ಅನ್ನಪೂರ್ಣ ತಮ್ಮ ಬದುಕಿನ ಅನೇಕ ಹೃದಯಮುಟ್ಟುವ ಚಿತ್ರಗಳನ್ನು ಕೊಟ್ಟಿದ್ದಾರೆ. ಇದಕ್ಕೆ ಗವೀಶ ಹಿರೇಮಠರ ಸರಳ ನಿರೂಪಣೆ ಕೂಡಾ ಕಾರಣವಾಗಿದೆ. ಕೃತಿಯ ಮುನ್ನುಡಿಯಲ್ಲಿ ಬಿ.ಎ ವಿವೇಕ ರೈ ಅವರು, `ಬಣ್ಣದ ಬದುಕು ಮುಖದಲ್ಲಿ ನಗುವನ್ನು, ಕಣ್ಣಿನಲ್ಲಿ ಕಾಂತಿಯನ್ನು, ಮೈಯಲ್ಲಿ ಉತ್ಸಾಹವನ್ನು ತುಂಬಿಕೊಂಡು ಎಲ್ಲವನ್ನು ಮರೆಯುವ ಮತ್ತು ಗಂಧದಂತೆ ತೇಯುವ ಕಾಯಕದ ಸಂಕಥನ ಬಹಳ ಅದ್ಭುತವಾಗಿ ಮೂಡಿ ಬಂದಿದೆ‘ ಎಂದಿದ್ದಾರೆ. ವೃತ್ತಿ ರಂಗಭೂಮಿಯನ್ನು ನೆಚ್ಚಿಕೊಂಡು ಅದರಲ್ಲೇ ತಮ್ಮ ಬದುಕನ್ನು ಸವೆಸಿ ತಮ್ಮ ಬಾಳಿನ ಪುಟಗಳನ್ನು ತೆರೆದಿಟ್ಟ ಅನ್ನಪೂರ್ಣರ ಈ ಆತ್ಮಚರಿತ್ರೆ ಮಹತ್ವಪೂರ್ಣವಾದದ್ದು ಎಂಬುದರಲ್ಲಿ ಸಂದೇಹವಿಲ್ಲ. ಜೊತೆಗೆ, ಇದು ರಂಗಭೂಮಿಯ ಸುಮಾರು ಅರ್ಧ ಶತಕದ ಚರಿತ್ರೆಯನ್ನೂ, ಮಹಿಳೆಯೊಬ್ಬಳ ಹೋರಾಟವನ್ನೂ ಒಟ್ಟಾಗಿಯೇ ಹೇಳುತ್ತದೆ ಎಂಬ ಕಾರಣಕ್ಕೂ ಇದು ಮುಖ್ಯವಾಗುತ್ತದೆ.

 

About the Author

ಗವೀಶ ಹಿರೇಮಠ
(08 September 1946 - 13 August 2020)

ಲೇಖಕ ಗವೀಶ ಹಿಮಠ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ ಗ್ರಾಮದವರು. ಪುರಾಣ ಪ್ರವಚನಕಾರ ವೀರಭದ್ರಯ್ಯ-ಪಾರ್ವತಮ್ಮ ದಂಪತಿಯ ಪುತ್ರರು. 08.09.1946 ರಂದು ಜನನ. ಓದಿದ್ದು ಕೊಪ್ಪಳ, ಧಾರವಾಡದಲ್ಲಿ. ಗುಲ್ಬರ್ಗ ವಿ.ವಿ. ಯ ಗ್ರಂಥಾಲಯದ ಪ್ರ.ಸಹಾಯಕರಾಗಿ ನಿವೃತ್ತರಾಗಿದ್ದರು. ಕಳೆದ 50 ವರ್ಷಗಳಿಂದ ಕಲಬುರಗಿಯಲ್ಲೇ ವಾಸವಾಗಿದ್ದರು.  ಜಾಗತೀಕರಣ ಮತ್ತು ಜಾನಪದ. ಡಾ.ಬಿ.ಎಸ್. ಗದ್ದಗಿಮಠ: ಬದುಕು ಬರಹ. ರಂಗಭೂಮಿ ಜೀವ-ಜೀವಾಳ ಶ್ರೀಧರ ಹೆಗಡೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.  ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ರಂಗಕನಸುಗಳು (1989-90) ಹಾಗೂ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ರಂಗಾಂತರಂಗ  ((2003-04) ಶೀರ್ಷಿಕೆಗಳಡಿ ರಂಗಭೂಮಿ ಕುರಿತು ಅಂಕಣಗಳನ್ನು ಬರೆದು ರಂಗಕರ್ಮಿಗಳನ್ನು ಪರಿಚಯಿಸಿದರು. ಇವರ ಕಲಾವಿದರು ನಡೆದು ಬಂದ ...

READ MORE

Related Books