‘ಬದುಕು ಬರಹ’ ಭಾರತಿ ಭಟ್ ಅವರ ಜೀವನ ಕುರಿತು ಬರೆದ ಬರಹವಾಗಿದೆ. ಪುಸ್ತಕದ ಕುರಿತು ಬರೆದಿರುವ ಭಾರತಿ ಭಟ್ ಅವರು 'ಈ ಪುಸ್ತಕದಲ್ಲಿ ನಾನು ನನ್ನ ಎಳೆಹರೆಯದಿಂದ ತೊಡಗಿ ಮುದಿತನದ ಎಂದರೆ 80ನೇ ವರ್ಷದ ವರೆಗೆ ನಡೆದುದನ್ನು ತುಂಬಾ ಅಡಕವಾಗಿ ಬರೆದಿದ್ದೇನೆ. 1963ರಲ್ಲಿ ನನ್ನ ಮದುವೆಯಾಯಿತು. ಆಮೇಲೆ ನನ್ನ ನಡುಹರೆಯದ ಜೀವನ. ಹಲವಾರು ಊರುಗಳಲ್ಲಿ ಮತ್ತು ನಾಡುಗಳಲ್ಲಿ ನನ್ನ ಪತಿಯೊಡನೆ ಮತ್ತು ಮಕ್ಕಳೊಡನೆ ಒಡನಾಡಿದ ಸುದ್ದಿಗಳನ್ನು ಇದರಲ್ಲಿ ಬರೆದಿದ್ದೇನೆ' ಎಂದಿದ್ದಾರೆ. ಹಾಗೇ ಪುಣೆಯಲ್ಲಿದ್ದಾಗ, ಮತ್ತು ಬೇರೆಯೂ ಹಲವು ಕಡೆಗಳಲ್ಲಿದ್ದಾಗ ನಾನು ದಿನಚರಿ ಬರೆಯುತ್ತಿದ್ದೆ. ಆದರೆ, ಅವುಗಳನ್ನೆಲ್ಲ ನಾನು ಇಟ್ಟುಕೊಂಡಿಲ್ಲ. ಹಾಗಾಗಿ, ನನ್ನ ನೆನೆಪಿಂದಲೇ ಈ ಸುದ್ದಿಗಳನ್ನು ಆರಿಸಿ ಬರೆಯಬೇಕಾಗಿದೆ ಎಂದು ತಿಳಿಸಿದ್ದಾರೆ.
ಭಾರತಿ ಭಟ್ ಅವರು ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನ ಕೊಂಬೆಟ್ಟಿನವರು. ಪುತ್ತೂರಿನಲ್ಲೇ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಬಳಿಕ 1963ರಲ್ಲಿ ಡಿ.ಎನ್. ಶಂಕರ ಭಟ್ಟರನ್ನು ವಿವಾಹವಾದರು. ಮುಂದೆ ಪುಣೆಯಿಂದ ಜೀವನ ಶುರುವಾಗಿ ಮೈಸೂರಿನವರೆಗೆ ಹಲವಾರು ಊರುಗಳಲ್ಲಿ ನಡೆಯಿತು. ಬರವಣಿಗೆ ಮೇಲೆ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಭಾರತಿ ಭಟ್ ಅವರು ಆ ಅನುಭವಗಳನ್ನು ಒಟ್ಟುಸೇರಿಸಿ ʻಬದುಕು ಬರಹʼ ಪುಸ್ತಕದ ಮೂಲಕ ಹೊರತಂದಿದ್ದಾರೆ. ...
READ MORE