ಭಾರತ ಸ್ವಾತಂತ್ಯ್ರ ಹುತಾತ್ಮ ಕವಿ ಅಶ್ಫಾಖ್ ಉಲ್ಲಾಖಾನ್

Author : ಜೆ. ಕಲೀಂ ಬಾಷ

Pages 160

₹ 144.00




Year of Publication: 2019
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580/01

Synopsys

ಕಲೀಂ ಬಾಷ ಅವರ "ಭಾರತ ಸ್ವಾತಂತ್ರ್ಯ ಹುತಾತ್ಮ ಕವಿ ಅಶ್ಫಾಖ್ ಉಲ್ಲಾಖಾನ್" ಹಿಂದಿ ಅನುವಾದಿತ ಕೃತಿ. ಮೂಲ ಕರ್ತೃ -ಐ.ಎಂ. ರಾಜಸ್ವಿ. ಬ್ರಿಟಿಷರ ವಿರುದ್ಧ ಹಿಂದೂ-ಮುಸ್ಲಿಂ ಎನ್ನದೇ ಐಕ್ಯತೆಯಿಂದ ಹೋರಾಢಿದ್ದರು. ಆದರೆ, ಕೋಮು ದ್ವೇಷದ ಭಾವನೆ ಬೆಳೆಸಿ ಬ್ರಿಟಿಷರು ತಮ್ಮ ಬೇಳೆ ಬೆಳೆಯಿಸಿಕೊಂಡಿದ್ದರ ಫಲವಾಗಿ ಇಂದು ಪಾಕಿಸ್ತಾನ ರೂಪುಗೊಂಡಿದೆ. ಈ ರೀತಿಯ ವಿಭಜನೆಯು ಭಾರತದ ಸಮಸ್ಯೆಯಾಗಿಯೂ ಕಾಡುತ್ತದೆ. ಆದರೆ, ಸ್ವಾತಂತ್ಯ್ರಪೂರ್ವದ ಮುಸ್ಲಿಂ ಕವಿಗಳು ಭಾರತ ಮಾತೆಯನ್ನು ಕೊಂಡಾಡಿದ್ದು ತಳ್ಳಿ ಹಾಕುವಂತೆ ಇಲ್ಲ. ಇಂದು ಕೆಲ ಕೋಮುವಾದಿ ದುಷ್ಖರ್ಮಿಗಳು ಕವಿಗಳಿಗೂ ಕೋಮಿನ ಬಣ್ಣ ಬಳಿಯುತ್ತಿದ್ದಾರೆ. ಹೀಗಾಗಿ, ಭಾರತೀಯತೆಗೆ ಧಕ್ಕೆ ಯಾಗುತ್ತಿದೆ ಎಂದು ಲೇಖಕರು ವಿಷಾದಿಸಿದ್ದಾರೆ.

ಲೇಖಕ ಪುರುಷೋತ್ತಮ ಬಿಳಿಮಲೆ ಅವರು ಈ ಕೃತಿ ಕುರಿತು ‘ಯಾವುದೋ ಕಾಲದಲ್ಲಿ ಓರ್ವ ಮುಸ್ಲಿಂ ಅರಸನು ಮಾಡಿದ ಅನ್ಯಾಯಗಳನ್ನು ಮುನ್ನೆಲೆಗೆ ತಂದು ಚರ್ಚಿಸುವ ಈಚಿನ ಬಲಪಂಥೀಯರು ದೇಶಕ್ಕಾಗಿ ಬ್ರಿಟಿಷರಿಂದ ಗಲ್ಲುಗಂಬಕ್ಕೇರಿದ ಅಶ್ಫಾಖ್ ಉಲ್ಲಾಖಾನ್‍ನಂಥ ದೇಶಪ್ರೇಮಿಯ ಬಗ್ಗೆ ಮಾತನಾಡುವುದೇ ಇಲ್ಲ. ಈ ಜಾಣ ಮರೆವನ್ನು ಕಲೀಂ ಬಾಷ ಅವರ ಪ್ರಸ್ತುತ ಅನುವಾದಿತ ಕೃತಿ ಅದ್ಭುತವಾಗಿ ಪ್ರಶ್ನಿಸುತ್ತದೆ. ಅಶ್ಫಾಖ್ ಉಲ್ಲಾ ಅಂಥವರ ತ್ಯಾಗ ಬಲಿದಾನದ ಬಗ್ಗೆ ಓದುವುದು, ತಿಳಿದುಕೊಳ್ಳುವುದು ಬಹಳ ಅಗತ್ಯ’ ಎಂದು ಪ್ರಶಂಸಿಸಿದ್ದಾರೆ.

About the Author

ಜೆ. ಕಲೀಂ ಬಾಷ

.ದಿ. ಎನ್. ಜಮಾಲ್ ಖಾನ್ ಹಾಗೂ ದಿ. ಬಿ. ಸೋಫಿಯಾ ದಂತಿಯ ಪುತ್ರ ಜೆ. ಕಲೀಂ ಬಾಷ. ದಾವಣಗೆರೆ ಜಿಲ್ಲೆಯ ಹರಿಹರ ಮೂಲದವರು.  ಶಾಹಿನಾ ಮತ್ತು ಇತರ ಕವಿತೆಗಳು (1987), ಮನೆಯಲ್ಲಿ ಬೆಳದಿಂಗಳು (ಮಕ್ಕಳ ಸಚಿತ್ರ ಕವನ ಸಂಕಲನ-2001 ಹಾಗೂ 2010), ಗುಜರಾತಿನಲ್ಲಿ ಗಾಂಧೀ ಆತ್ಮ (ಕವನ ಸಂಕಲನ-2002) ಬರೆದಿದ್ದಾರೆ. ಇವರ ಪ್ರೆಸ್ ರಿಪೋರ್ಟ್‌ರ್ ಕವಿತೆಗೆ (1987) ಹಾಗೂ ನೋವು ನನ್ನ ಎದೆಯಲ್ಲಿ (1999)  ಚುಟುಕಿಗೆ ಸಂಕ್ರಮಣ ಸಾಹಿತ್ಯ ಬಹುಮಾನ ಹಾಗೂ ಮನೆಯಲ್ಲಿ ಬೆಳದಿಂಗಳು ಕೃತಿಗೆ ಬೆಂಗಳೂರಿನ ಗೊರೂರು ಪ್ರತಿಷ್ಠಾನ ರನ್ನ ಸಾಹಿತ್ಯ ಪ್ರಶಸ್ತಿ  ಲಭಿಸಿದೆ. ...

READ MORE

Related Books