‘ಎಂ.ಎಸ್. ಲಠ್ಠೆ’ ವೀರಣ್ಣ ದಂಡೆ ಅವರು ಬರೆದ ವ್ಯಕ್ತಿಚಿತ್ರಣ ಕೃತಿಯಾಗಿದೆ. ಮುತನಾಳ ಶಿವಪ್ಪ ಲಜ್ಜೆಯವರು ಉತ್ತರ ಕರ್ನಾಟಕದ ಸುಪ್ರಸಿದ್ಧ ಜಾನಪದ ವಿದ್ವಾಂಸರಲ್ಲಿ ಅಗ್ರಗಣ್ಯರು. ಜನಪದ ಕವಿಚರಿತ್ರೆ, ತತ್ವಪದ, ಬಯಲಾಟ, ಭಾಷಿಕ ಜಾನಪದದಲ್ಲಿ ಅವರದು ದೊಡ್ಡಕೊಡುಗೆ, ಜನಪದ ಕಾವ್ಯ ಶೋಧನೆಯ ಜೊತೆಗೆ ಜನಪದ ಕಾವ್ಯ ನಿರೂಪಕರ ಚರಿತ್ರೆ ಶೋಧನೆಗೆ ಆಸಕ್ತಿ ತೋರಿದ್ದು ಅವರ ವಿಶೇಷ. ವ್ಯಾಪಕವಾಗಿ ಕ್ಷೇತ್ರಕಾರ್ಯಮಾಡಿ ಅಪರೂಪದ ಹಾಡು, ಹಾಡುಗಾರರನ್ನು ಪರಿಚಯಿಸಿ ಕನ್ನಡ ಜನಪದ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದರು; ಕನ್ನಡ ಜನಪದ ಅಧ್ಯಯನ ಪರಿಧಿಯನ್ನು ವಿಸ್ತರಿಸಿದರು. ಸೃಜನಶೀಲ ಸಾಹಿತಿಯೂ ಆದ ಸಜ್ಜನ ಸಂಭಾವಿತ ವಿದ್ವಾಂಸ ಡಾ. ಲಯವರು ಜೀವನ ಪರ್ಯಂತ ಸಾಹಿತ್ಯ ಸಂಸ್ಕೃತಿ ಅನಾವರಣಕಾರರಾಗಿ ಸೇವೆ ಸಲ್ಲಿಸಿದರು. ಕನ್ನಡದ ಜನಪ್ರಿಯ ವಿದ್ವಾಂಸರಾದ ಡಾ. ವೀರಣ್ಣ ದಂಡೆಯವರು ಡಾ. ಲಠ್ಠೆ ಯವರ ಬದುಕು ಸಾಧನೆಯನ್ನು ಯಥಾವತ್ತಾಗಿ ವರ್ಣಿಸಿದ್ದಾರೆ.
ಜಾನಪದ ತಜ್ಞ, ಸಂಶೋಧಕ ವೀರಣ್ಣ ದಂಡೆಯವರು ಹುಟ್ಟಿದ್ದು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸಲಗರ ಗ್ರಾಮದಲ್ಲಿ. ತಂದೆ ಶರಣಪ್ಪ ದಂಡೆ, ತಾಯಿ ಬಂಡಮ್ಮ. ಪ್ರಾರಂಭಿಕ ಶಿಕ್ಷಣ ಸಲಗರ. ಬಿ.ಎ, ಎಂ.ಎ. ಪದವಿ ಕಲಬುರ್ಗಿ. “ಕಲಬುರ್ಗಿ ಜಿಲ್ಲೆಯ ಜನಪದ ಕಥೆಗಳ ಆಶಯ ಮತ್ತು ಮಾದರಿಗಳು” ಮಹಾಪ್ರಬಂಧ ಮಂಡಿಸಿ ಕಲಬುರ್ಗಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. 1984ರಲ್ಲಿ ಉದ್ಯೋಗಕ್ಕಾಗಿ ಸೇರಿದ್ದು ಬೋಧನಾವೃತ್ತಿ. ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಣೆ. ಸಹಾಯ ಸಂಶೋಧಕರಾಗಿ ಉತ್ತರ ಕನ್ನಡದ ಏಳು ಜಿಲ್ಲೆಗಳ ಪ್ರವಾಸ. ಜಾನಪದ ವೈದ್ಯಕೋಶ ಸಂಶೋಧನಾ ಯೋಜನೆಯಡಿ ಕ್ಷೇತ್ರ ಸಹಾಯಕರ ಕಾರ್ಯ. ನಾಲ್ಕು ...
READ MORE