ಬ್ರಿಟಿಷ್ ಮಹಾಕವಿ ವರ್ಡ್ಸ್ ವರ್ತ್ ಕುರಿತು ಅನಂತಮೂರ್ತಿ ಅವರು ಬರೆದ ಕೃತಿ ಇದು. ವರ್ಡ್ಸ್ ವರ್ತ್ ಒಂದು ಭಾಗ್ಯವೆಂದರೆ, ಪ್ರಕ್ಷುಬ್ದ ಕಾಲದಲ್ಲೂ, ಆತನ ವೈಯಕ್ತಿಕ ಜಗತ್ತು ಮತ್ತು ಸಾಮಾಜಿಕ ಜಗತ್ತುಗಳೆರಡೂ ಅತೀವ ಕ್ಷೋಭೆಯಲ್ಲಿದ್ದ ಕಾಲದಲ್ಲೂ, ಆತ ಸಾಮಾನ್ಯ ಮನುಷ್ಯರ ಬಗ್ಗೆ ಹೊಂದಿದ್ದ ವಿಶ್ವಾಸವನ್ನು ಮಾತ್ರ ಕಳೆದುಕೊಳ್ಳಲಿಲ್ಲ. ಹಾಗೆ ನೋಡಿದರೆ, ಆ ವಿಶ್ವಾಸ ಇನ್ನಷ್ಟು ಅಚಲ ಆಗುತ್ತಾ ನಡೆಯಿತು. ಮತ್ತದು ಒಟ್ಟೂ ಕವಿವೃಂದದಲ್ಲಿ ಮಾತ್ರವಲ್ಲದೆ ಅವನೇ ಉದ್ಘಾಟಿಸಿದ ಆಂಗ್ಲ ರೊಮ್ಯಾಂಟಿಕ್ ಕಾವ್ಯ ಪಂಥದೋಳಗೂ ಅವನಿಗೊಂದು ಅನನ್ಯತೆಯನ್ನು ತಂದುಕೊಟ್ಟಿತು. ಆತನ ಬದುಕು ಬರಹಗಳು ಒಂದಕ್ಕೊಂದು ಪೂರಕವಾಗಿದ್ದವು. ಅವನ ಬರೆಹ ಮತ್ತು ಬದುಕಿನ ಬಗ್ಗೆ ಸಂಕ್ಷಿಪ್ತ ನೋಟವನ್ನು ಈ ಕೃತಿ ಹೊದಗಿಸುತ್ತದೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE