‘ಕಾರ್ಲ್ ಮಾರ್ಕ್, ಆಧುನಿಕ ಕಮ್ಯೂನಿಸಮ್ ನ ಸ್ಥಾಪಕ’ ಕೃತಿಯು ಜೆ.ಆರ್. ಲಕ್ಷ್ಮಣರಾವ್ ಹಾಗೂ ಜೀವೂಬಾಯಿ ಲಕ್ಷ್ಮಣರಾವ್ ಅವರ ವ್ಯಕ್ತಿಚಿತ್ರಣ ಕೃತಿಯಾಗಿದೆ. ಕ್ರಾಂತಿಕಾರಿಯಾಗಿದ್ದು ಸಮಾಜದಲ್ಲಿ ಮೂಲಭೂತ ಬದಲಾವಣೆಯನ್ನೇ ತರಲು ಸದಾ ಚಿಂತಿಸುತ್ತಿದ್ದ ಜನಹಿತವಾದಿ, ಬಂಡವಾಳಶಾಹಿ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆಂದು ಅದರ ಬೇರುಮೂಲದವರೆಗೂ ಅಭ್ಯಸಿಸಿ ಅದರ ನಿರ್ಮೂಲನೆಗೆ ಹಲವಾರು ಚಳವಳಿಗಳನ್ನು ಹುಟ್ಟುಹಾಕಿದ್ದಷ್ಟೇ ಅಲ್ಲದೆ ಅದರಲ್ಲಿ ಯಶಸ್ವಿಯೂ ಆಗಿದ್ದ ಒಬ್ಬ ಮಾನವತಾವಾದಿ. ಅಪರೂಪದ ಇಂಥ ಹೋರಾಟಗಾರರು ಜಗತ್ತನ್ನೇ ಬದಲಿಸುವ ಸಂಕಲ್ಪತೊಟ್ಟು ತಮ್ಮ ಕೌಟುಂಬಿಕ ವೈಯಕ್ತಿಕ ಜೀವನದ ಸುಖಗಳನ್ನೆಲ್ಲ ಲೋಕಹಿತಕ್ಕಾಗಿ ತ್ಯಾಗ ಮಾಡಿರುತ್ತಾರೆ. ಮಾರ್ಕ್ಸ್ ಬರೆದ ವಿಪುಲ ಸಾಹಿತ್ಯದಲ್ಲೆಲ್ಲ ಶೋಷಿತ ಶ್ರಮಜೀವಿ ವರ್ಗದ ಹಿತಾಸಕ್ತಿಯೇ ಅಷ್ಟೊತ್ತಿ ನಿಂತಿದೆ. ಅವರ ಸಿದ್ಧಾಂತಗಳು ಅಂದಿಗಷ್ಟೇ ಅಲ್ಲ; ಸದಾಕಾಲಕ್ಕೂ ನಿತ್ಯನೂತನವಾಗಿದ್ದು ಸಮಾಜವಾದಿ ವ್ಯವಸ್ಥೆಗೆ ಭದ್ರ ಬುನಾದಿ ಒದಗಿಸುತ್ತವೆಎನ್ನುತ್ತದೆ ಈ ಕೃತಿ.
ಜಗಳೂರು ರಾಘವೇಂದ್ರರಾವ್ ಲಕ್ಷ್ಮಣರಾವ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜೆ.ಆರ್. ಲಕ್ಷ್ಮಣರಾವ್ ಎಂದೇ ಚಿರಪರಿಚಿತರು. 1921 ಜನವರಿ 21 ರಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜನಿಸಿದರು. ತಂದೆ ರಾಘವೇಂದ್ರ ರಾವ್ ಮತ್ತು ತಾಯಿ ನಾಗಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಜಗಳೂರಿನಲ್ಲಿ ನಡೆಸಿದ ಅವರು ಪ್ರೌಢ ಶಾಲೆಯ ಅಭ್ಯಾಸ ದಾವಣಗೆರೆಯಲ್ಲಿ ಪೂರ್ಣಗೊಳಿಸಿದರು. ಈಗ ಯುವರಾಜ ಕಾಲೇಜು ಎಂದು ಕರೆಯಲಾಗುವ ’ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಕಾಲೇಜ್’ ಅಧ್ಯಯನ ಮುಂದುವರೆಸಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ರಸಾಯನ ಶಾಸ್ತ್ರದಲ್ಲಿ ಎಮ್ಮೆಸ್ಸಿ ಪದವಿ ಪಡೆದರು. ತುಮಕೂರು ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯಾರಂಭ ಮಾಡಿದ ಅವರು ಬೆಂಗಳೂರಿನ ಸೇಂಟ್ರಲ್ ಕಾಲೇಜ್, ಶಿವಮೊಗ್ಗೆಯ ಸಹ್ಯಾದ್ರಿ ...
READ MORE(ಕಾರ್ಲ್ ಮಾರ್ಕ್, ಆಧುನಿಕ ಕಮ್ಯೂನಿಸಮ್ ನ ಸ್ಥಾಪಕ, ಹೊಸತು ಜನವರಿ 2014, ಪುಸ್ತಕದ ಪರಿಚಯ)
ಲೋಕದ ಎಲ್ಲ ಶ್ರಮಜೀವಿಗಳು ಸದಾ ಸ್ಮರಿಸಿಕೊಳ್ಳಬೇಕಾದ ಚಿರಪರಿಚಿತ ಹೆಸರು. ಜರ್ಮನ್, ಫ್ರೆಂಚ್, ಇಂಗ್ಲಿಷ್ ಭಾಷೆಗಳಲ್ಲಿ ಅಸಾಧಾರಣ ಪಾಂಡಿತ್ಯವಿದ್ದ ಕಾರ್ಮಿಕ ಬಂಧು. ಕ್ರಾಂತಿಕಾರಿಯಾಗಿದ್ದು ಸಮಾಜದಲ್ಲಿ ಮೂಲಭೂತ ಬದಲಾವಣೆಯನ್ನೇ ತರಲು ಸದಾ ಚಿಂತಿಸುತ್ತಿದ್ದ ಜನಹಿತವಾದಿ, ಬಂಡವಾಳಶಾಹಿ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆಂದು ಅದರ ಬೇರುಮೂಲದವರೆಗೂ ಅಭ್ಯಸಿಸಿ ಅದರ ನಿರ್ಮೂಲನೆಗೆ ಹಲವಾರು ಚಳವಳಿಗಳನ್ನು ಹುಟ್ಟುಹಾಕಿದ್ದಷ್ಟೇ ಅಲ್ಲದೆ ಅದರಲ್ಲಿ ಯಶಸ್ವಿಯೂ ಆಗಿದ್ದ ಒಬ್ಬ ಮಾನವತಾವಾದಿ, ಅಪರೂಪದ ಇಂಥ ಹೋರಾಟಗಾರರು ಜಗತ್ತನ್ನೇ ಬದಲಿಸುವ ಸಂಕಲ್ಪತೊಟ್ಟು ತಮ್ಮ ಕೌಟುಂಬಿಕ ವೈಯಕ್ತಿಕ ಜೀವನದ ಸುಖಗಳನ್ನೆಲ್ಲ ಲೋಕಹಿತಕ್ಕಾಗಿ ತ್ಯಾಗ ಮಾಡಿರುತ್ತಾರೆ. ಮಾರ್ಕ್ಸ್ ಬರೆದ ವಿಪುಲ ಸಾಹಿತ್ಯದಲ್ಲೆಲ್ಲ ಶೋಷಿತ ಶ್ರಮಜೀವಿ ವರ್ಗದ ಹಿತಾಸಕ್ತಿಯೇ ಅಷ್ಟೊತ್ತಿ ನಿಂತಿದೆ. ಅವರ ಸಿದ್ಧಾಂತಗಳು ಅಂದಿಗಷ್ಟೇ ಅಲ್ಲ; ಸದಾಕಾಲಕ್ಕೂ ನಿತ್ಯನೂತನವಾಗಿದ್ದು ಸಮಾಜವಾದಿ ವ್ಯವಸ್ಥೆಗೆ ಭದ್ರ ಬುನಾದಿ ಒದಗಿಸುತ್ತವೆ. ಈ ಕೃತಿ ಇಂಥ ಮಹಾನುಭಾವನ ಜೀವನಗಾಥೆಯನ್ನು ಕುರಿತಾದದ್ದು, ಹೋರಾಟದ ಬದುಕನ್ನು ಬಾಳೆದವರಿಗೆ ಸ್ವಂತದ್ದಾಗಿ ಬೇರೊಂದು ಬದುಕು ಇರಲಾರದು. ಆದರೂ ತನ್ನ ಧೈಯೋದ್ದೇಶಗಳಿಗೆ ಸ್ಪಂದಿಸಿದ ಕುಟುಂಬದ ಸದಸ್ಯರು ಹಾಗೂ ಪ್ರಾಣಕ್ಕಿಂತ ಹೆಚ್ಚಾಗಿ ಸಹಕರಿಸಿದ ಸ್ನೇಹಿತರು, ಅಂತರಂಗದ ಆದರಣೀಯ ವ್ಯಕ್ತಿಗಳು ಮಾರ್ಕ್ಸ್ ಜೊತೆಗಿದ್ದರು. ಇವರನ್ನೂ ಒಳಗೊಂಡಂತೆ ಪರಿಚಯಿಸಲಾದ ಈ ಕೃತಿ ಅಸಾಧಾರಣ ಪ್ರತಿಭಾವಂತನ ಜೀವನ ಚಿತ್ರಣ.