ಉಳಿದಾವ ನೆನಪು

Author : ಪದ್ಮರಾಜ ದಂಡಾವತಿ

Pages 224

₹ 250.00




Year of Publication: 2024
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ಉಳಿದಾವ ನೆನಪು’ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿಯವರ ವೃತ್ತಿ ಬದುಕಿನ ಕಥನ. ಇವನ್ನು ಪತ್ರಕರ್ತನ ವೃತ್ತಿಬದುಕಿನ ನೆನಪುಗಳು ಎನ್ನುವ ಪದ್ಮರಾಜ ದಂಡಾವತಿ ಅವರು ಈ ಪುಸ್ತಕದಲ್ಲಿ ನಾನು, 'ಅದು ಮಾಡಿದೆ', 'ಇದು ಮಾಡಿದೆ' ಎಂದು ಎಲ್ಲಿಯೂ ದಾಖಲೆ ಕೊಡುವ ಪ್ರಯತ್ನ ಮಾಡಿಲ್ಲ. ಅಲ್ಲಲ್ಲಿ ಅಂಥದು ಬಂದರೂ ಅದಕ್ಕೆ ಇರುವ ಕಾರಣವನ್ನೋ, ಹಿನ್ನೆಲೆಯನ್ನೋ ಹೇಳಲು ಪ್ರಯತ್ನ ಮಾಡಿರುವೆ ಎಂದಿದ್ದಾರೆ. ಪತ್ರಿಕಾ ವೃತ್ತಿ ಏಕಾಂಗಿಯಾಗಿ ಮಾಡುವಂಥದೂ ಹೌದು. ಸಾಮೂಹಿಕವಾಗಿ ಮಾಡುವುದೂ ಹೌದು. 'ಪ್ರಜಾವಾಣಿ'ಯಲ್ಲಿ ನಾನು ಕೊನೆಯ ಒಂಬತ್ತು ವರ್ಷ ಒಂಬತ್ತು ತಿಂಗಳು ಸಹ ಸಂಪಾದಕನಾಗಿ ಮತ್ತು ಕಾರ್ಯನಿರ್ವಾಹಕ ಸಂಪಾದಕನಾಗಿ ಕೆಲಸ ಮಾಡಿದೆ. ನನ್ನ ಮೇಲೆ ಒಬ್ಬ ಸಂಪಾದಕರು ಇರುತ್ತಿದ್ದರು. ನನ್ನ ಜತೆಗೆ ಕೆಲಸ ಮಾಡುವ 250ಕ್ಕೂ ಹೆಚ್ಚು ಜನ ಸಿಬ್ಬಂದಿಯೂ ಇದ್ದರು.

ಈ ಅವಧಿಯಲ್ಲಿ 'ಪ್ರಜಾವಾಣಿ'ಯಲ್ಲಿ ಆದ ಯಾವುದೇ ಸಾಧನೆಗೆ ನಾನು ಶ್ರೇಯ ತೆಗೆದುಕೊಳ್ಳಲು ಹೋಗಿಲ್ಲ. ಅದನ್ನು ದಾಖಲಿಸಿಯೂ ಇಲ್ಲ. ಏನಾದರೂ ಸಾಧನೆಯಾಗಿದ್ದರೆ ಅದಕ್ಕೆ ನನ್ನ ಮೇಲೆ ಇದ್ದ ಸಂಪಾದಕರು ಕಾರಣ ಮತ್ತು ನನ್ನ ಜತೆಗೆ ಇದ್ದ ಸಹೋದ್ಯೋಗಿಗಳು ಕಾರಣ. ಆ ಕಾಲದ ಸಾಮಾಜಿಕ, ರಾಜಕೀಯ, ಸಾಹಿತ್ಯಕ ಮುಂತಾದ ವಿದ್ಯಮಾನಗಳನ್ನು ನಾನು ನನ್ನ 'ನಾಲ್ಕನೇ ಆಯಾಮ' ಅಂಕಣದಲ್ಲಿ ಪ್ರಸ್ತಾಪ ಮಾಡಿರುವ ಕಾರಣ ಅವುಗಳನ್ನು ಇಲ್ಲಿ ಮತ್ತೆ ಚರ್ಚೆ ಮಾಡಲು ಹೋಗಿಲ್ಲ.

ಈ ಪುಸ್ತಕ ಪ್ರಕಟವಾಗುವುದಕ್ಕಿಂತ ಮುಂಚೆ ಒಬ್ಬರು ಅದನ್ನು ನೋಡಲೇ ಬೇಕಿತ್ತು. ಅವರು ನನ್ನ ಸಂಪಾದಕರಾಗಿದ್ದ ಕೆ.ಎನ್. ಶಾಂತಕುಮಾರ್ ಅವರು. ನಾನು ಮತ್ತು ಅವರು ಜತೆಯಾಗಿ ಸುಮಾರು 16 ವರ್ಷ ಕೆಲಸ ಮಾಡಿದೆವು. ಸುಮಾರು ಎಂಟು ವರ್ಷಗಳ ಕಾಲ ನಾನು ಅವರ ನೇರ ಅಧೀನದಲ್ಲಿಯೇ ಕೆಲಸ ಮಾಡಿದೆ. ಅದು ಒಂದು ಅಪೂರ್ವ ಅನುಭವ. ಬೇಕಾದಷ್ಟು ಕಲಿತೆ ಎಂದು ತಿಳಿಸಿದ್ದಾರೆ.

 

About the Author

ಪದ್ಮರಾಜ ದಂಡಾವತಿ
(30 August 1955)

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದಲ್ಲಿ 1955ರ ಆಗಸ್ಟ್ 30 ರಂದು ಪದ್ಜರಾಜ ದಂಡಾವತಿ ಅವರು ಜನಿಸಿದರು. ತಂದೆ ದೇವೇಂದ್ರಪ್ಪ, ತಾಯಿ ಚಂಪಮ್ಮ. ಪ್ರಾಥಮಿಕ- ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಮುದ್ದೇಬಿಹಾಳದಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ರಾಮದುರ್ಗದಲ್ಲಿ ಪೂರೈಸಿದರು. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಪತ್ರಕರ್ತರಾಗಿ 1982ರಲ್ಲಿ ಪ್ರಜಾವಾಣಿ ಸೇರಿದ್ದು, ಹಂತ ಹಂತವಾಗಿ ಬಡ್ತಿ ಹೊಂದಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಸತತ ಎಂಟು ವರ್ಷಗಳಿಂದ ಅವರು ಪ್ರತಿ ಭಾನುವಾರ ಪ್ರಜಾವಾಣಿಯಲ್ಲಿ ಬರೆದ ‘ನಾಲ್ಕನೇ ಆಯಾಮ’ ಅಂಕಣ, ತನ್ನವಿಚಾರ-ವಿಷಯ ವೈವಿಧ್ಯತೆಯಿಂದಾಗಿ ಜನಪ್ರಿಯತೆ ಪಡೆದಿತ್ತು.  ಕೃತಿಗಳು:  ಪತ್ರಿಕಾಭಾಷೆ, ರಿಪೋರ್ಟಿಂಗ್, ಅವಲೋಕನ, ನಾಲ್ಕನೇ ಆಯಾಮ(ಆರು ...

READ MORE

Related Books