‘ಅಂಬೇಡ್ಕರ್ ಫಸಲು’ ಲೇಖಕ ಪ್ರೊ.ಎಚ್.ಟಿ.ಪೋತೆ ಅವರು ರಚಿಸಿರುವ ಜೀವನ ಚಿತ್ರಣ. ಅಂಬೇಡ್ಕರ್ ಎಲ್ಲಾ ಸಮಾಜ ಸುಧಾರಕರಿಗಿಂತಲೂ ಮುಖ್ಯರಾಗುವುದು ಅವರ ವಿಚಾರಧಾರೆಗಳಿಂದ. ಭಾರತೀಯ ಸಾಂಪ್ರದಾಯಿಕ ಸಮಾಜವು ನಿರ್ಮಿಸಿದ ಸಂಕಟಗಳ ಹೊಂಡದಲ್ಲಿ ಬಿದ್ದು ನಿತ್ರಾಣಗೊಂಡಿದ್ದ ಅಸಹಾಯಕ ಸಮುದಾಯಗಳಿಗೆ ಚೈತನ್ಯ ಬಂದದ್ದು ಅಂಬೇಡ್ಕರ್ ವಿಚಾರಗಳಿಂದಲೇ, ಬಹುಶಃ ಜಗತ್ತಿನ ಯಾವ ಶೋಷಿತ ಸಮುದಾಯವೂ ಅನುಭವಿಸದ ನೋವನ್ನು ಭಾರತೀಯ ಈ ಸಮುದಾಯಗಳು ಅನುಭವಿಸಿವೆ. ಹಾಗಾಗಿ ಇತರರ ಯಾತನೆಗಿಂತಲೂ ಭಾರತದ ಶೋಷಿತ ಸಮುದಾಯಗಳ ಯಾತನೆ ಅಕ್ಷರಗಳ ಅಂಚಿಗೆ ರೂಪ ಪಡೆಯಬೇಕು. ಈ ನಿಟ್ಟಿನಲ್ಲಿಯೇ ಅನೇಕರು ಪ್ರಯತ್ನಿಸಿದ್ದಾರೆ. ಅಕ್ಕರ ರೂಪ ಪಡೆಯಬೇಕು. ಇಂತಹ ಪ್ರಯತ್ನಕ್ಕೆ ಅಂಬೇಡ್ಕರ್ ಎಂಬ ವಿಶಾಲವಾದ ಆಸರೆಯು ಪ್ರೇರಕವಾಗಿದೆ. ಆ ಆಸರೆಯ ನೆರಳಿನಲ್ಲಿಯೇ ಅರಳಿದ ಕುಸುಮಗಳು ಹಲವಾರು. ಅಂತಹ ಕೆಲ ಕುಸುಮಗಳ ಒಳ ಎಸಳುಗಳನ್ನು ಈ ಕೃತಿಯಲ್ಲಿ ಪರಿಚಯಿಸಿದ್ದಾರೆ.
ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...
READ MORE