ಓದುಗರಿಗೆ ಅಪರಿಚಿತವೇ ಆಗಿದ್ದ ಹಳೆ ತಲೆಮಾರಿನ ಪ್ರತಿಭಾವಂತ ಬರಹಗಾರ್ತಿಯೊಬ್ಬರ ಜೀವನ ಸಾಧನೆಗಳನ್ನು ತೆರೆದು ತೋರಿಸುವ ಮೂಲಕ ಕನ್ನಡದ ಕಥನದಲ್ಲಿ ಕಣ್ಮರೆಯಾಗಿದ್ದ ಕೊಂಡಿಯೊಂದನ್ನು ಈ ಕೃತಿಯು ಸಮಕಾಲೀನ ಸಾಹಿತ್ಯ ಸಂಸ್ಕ ತಿಗೆ ಜೋಡಿಸುತ್ತದೆ. ಮಾತ್ರವಲ್ಲ, ಈ ಪುಸ್ತಕದಲ್ಲಿ ವೈದೇಹಿಯವರು ಸರಸ್ವತಿಬಾಯಿ ರಾಜವಾಡೆಯವರ ಭೂತಕಾಲದ ವೃತ್ತಾಂತಗಳಿಗೆ ಕಿವಿಯಾಗಿ, ಮತ್ತು ಅವರ ಕೊನೆಗಾಲದ ವರ್ತಮಾನದ ಜೀವನಕ್ರಮಕ್ಕೆ ಪ್ರತ್ಯಕ್ಷ ಸಾಕ್ಷಿಯೂ ಆಗಿ, ಇವೆರಡರ ದ್ವಂದ್ವಾತ್ಮಕ ಗ್ರಹಿಕೆಯಲ್ಲಿ ಪ್ರಸ್ತುತ ಕಥನವನ್ನು ಕಟ್ಟಿದ್ದಾರೆ. ಆ ಕಾಲದ ಮಹಿಳೆಯರ ಸ್ಥಿತಿಗತಿಗಳ ಸಂವೇದನಾಶೀಲ ದಾಖಲಾತಿ ಮತ್ತು ಆ ಒತ್ತಡಗಳ ನಡುವೆಯೇ ರೂಪುಗೊಂಡ ಅನನ್ಯವ್ಯಕ್ತಿತ್ವವೊಂದರ ಅವಲೋಕನ; ಇನ್ನೊಂದು, ಆ ಪ್ರಕ್ರಿಯೆಯ ಮೂಲಕ ಅರಳಿದ ಅಭಿವ್ಯಕ್ತಿ ಮಾದರಿಯ ಅನಾವರಣವಾಗಿದೆ.
ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ. ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ...
READ MORE