ವಿಶ್ವಶಕ್ತಿ ವಿವೇಕಾನಂದ

Author : ಡಿ.ಎಸ್. ಶ್ರೀನಿವಾಸ್ ಪ್ರಸಾದ್

Pages 48

₹ 30.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001

Synopsys

ಲೇಖಕ ಡಿ.ಎಸ್. ಶ್ರೀನಿವಾಪ್ರಸಾದ ಅವರ ಕೃತಿ-ವಿಶ್ವಶಕ್ತಿ ವಿವೇಕಾನಂದ. ಇವರ ಮೂಲ ಹೆಸರು ನರೇಂದ್ರನಾಥ ದತ್ತ (1863-1902). ಖೇತ್ರಿ ಸಂಸ್ಥಾನದ ಅರಸು ರಾಜಾ ಅಜಿತ್ ಸಿಂಗ್ ಬಹಾದೂರ್ ಯುವಕ ನರೇಂದ್ರನಲ್ಲಿ ಅದ್ಭುತವಾದ ‘ವಿವೇಕ‘ ಹಾಗೂ ‘ಆನಂದ’ ಇರುವುದರಿಂದ ಅವರಿಗೆ ‘ವಿವೇಕಾನಂದ‘ ಎಂಬ ಹೆಸರನ್ನು ನೀಡಿದರು. ವಿವೇಕಾನಂದರು ಭಾರತೀಯ ಸನ್ಯಾಸಿ. ರಾಮಕೃಷ್ಣ ಪರಮಹಂಸರ ಪ್ರಧಾನ ಶಿಷ್ಯರು. ‘ರಾಮಕೃಷ್ಣ ಮಠ‘ ಹಾಗೂ ‘ರಾಮಕೃಷ್ಣ ಮಿಷನ್‘ ಸಂಸ್ಥಾಪಕರು. ಪಾಶ್ಚಾತ್ಯ ಜಗತ್ತಿಗೆ ‘ವೇದಾಂತ‘ ಹಾಗೂ ‘ಯೋಗ‘ವನ್ನು ಪರಿಚಯಿಸಿದ ಪ್ರಮುಖರು. ತಮ್ಮ ಚಿಕಾಗೋ ಭಾಷಣದ ಮೂಲಕ ಅಂತರ ಧರ್ಮಗಳ ಅರಿವನ್ನು ಜಾಗತಿಕ ಮಟ್ಟದಲ್ಲಿ ತಂದು ಹಿಂದುಧರ್ಮದ ವಿಶಾಲತೆಯನ್ನು ಮೆರೆದರು. ನೇತಾಜಿ ಸುಭಾಷ್ ಚಂದ್ರ ಬೋಸರು ‘ಇಂದು ವಿವೇಕಾನಂದರು ಏನಾದರೂ ಇದ್ದಿದ್ದರೆ ನಾನು ಅವರನ್ನು ನನ್ನ ಗುರುಗಳನ್ನಾಗಿ ಸ್ವೀಕರಿಸುತ್ತಿದ್ದೆ‘ ಎಂದು ಹೇಳಿರುವರು. ವಿವೇಕಾನಂದರ ಸಲಹೆಯ ಮೇರೆಗೆ ಜೆಮ್‌ಶೆಡ್‌ಜಿ ಟಾಟಾರವರು ಬೆಂಗಳೂರಿನಲ್ಲಿ ‘ಭಾರತೀಯ ಟಾಟಾ ವಿಜ್ಞಾನ ಮಂದಿರ‘ವನ್ನು ಸ್ಥಾಪಿಸಲು ಧನ ಸಹಾಯ ಮಾಡಿದರು. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು.

About the Author

ಡಿ.ಎಸ್. ಶ್ರೀನಿವಾಸ್ ಪ್ರಸಾದ್

ಬೆಂಗಳೂರು ಮೂಲದವರಾದ ಲೇಖಕ ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರು ಬಾಲ್ಯದಿಂದಲೇ ಬರೆವಣಿಗೆಯಲ್ಲಿ ತೊಡಗಿಕೊಂಡವರು.ತಮ್ಮ 10ನೇ ವಯಸ್ಸಿನಲ್ಲೇ ಬೆಂಗಳೂರು ಆಕಾಶವಾಣಿಯಲ್ಲಿ ಬಾಲಕಲಾವಿದನಾಗಿ `ಒಗ್ಗಟ್ಟಿನಲ್ಲಿ ಬಲವಿದೆ', `ಸಮುದ್ರದಲ್ಲಿ ಆಹಾರ...' ಸೇರಿದಂತೆ 10 ನಾಟಕಗಳಲ್ಲಿ ಅಭಿನಯಿಸಿದ್ದರು.  ಆಚಾರ್ಯ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಇವರು 3 ವರ್ಷದಲ್ಲಿ ಸುಮಾರು 155 ಅಂತರಕಾಲೇಜು ಬಹುಮಾನಗಳನ್ನು ಪಡೆದು ಪ್ರತಿಭಾವಂತ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾದರು. ಶೇಷಾದ್ರಿಪುರಂ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ./ಪದವಿಯನ್ನು ವ್ಯಾಸಂಗ ಮಾಡಿದರು. ಪ್ರಸ್ತುತ ಅವರು ಕನ್ನಡ ಉಪನ್ಯಾಸಕರು.  ಕೃತಿಗಳು: ಸಾಹಿತ್ಯ ಶಿಲ್ಪಿ : ಚಿ ಉದಯಶಂಕರ್ , ಸ್ವರ ರಾಗ ಸುಧಾ : ಸಿನಿಮಾ ಸಂಗೀತದ ಕ್ಲಾಸಿಕಲ್ ಟಚ್.  ...

READ MORE

Related Books