`ಎ.ಆರ್. ಕೃಷ್ಣಶಾಸ್ತ್ರೀ’ ಕೃತಿಯು ಸಿ.ಆರ್. ಸತ್ಯ ಅವರ ಹೊಯ್ಸಳ ಮಾಲೆ-9ರ ಲೇಖನ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಬ್ರಾಹ್ಮಣ ಜನಾಂಗವು ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸಿ ದೇಶ ವಿದೇಶಗಳಲ್ಲಿ ಖ್ಯಾತಿಯನ್ನು ಪಡೆದಿದೆ. ಈ ಪಂಗಡದವರು ರಾಜಕೀಯ, ವಾಣಿಜ್ಯ, ಕೈಗಾರಿಕೆ, ವಿಜ್ಞಾನ, ಸಾಹಿತ್ಯ, ಸಂಗೀತ, ಕಲೆ, ವೈದ್ಯಕೀಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಈ ರೀತಿ ಪ್ರಸಿದ್ಧಿ ಪಡೆದ ಹಿರಿಯ ವ್ಯಕ್ತಿಗಳನ್ನು ನಮ್ಮ ಯುವ ಪೀಳಿಗೆಗೆ ಪರಿಚಯಿಸಿ ಅವರಿಗೆ ಚೇತನ ಮತ್ತು ಸ್ಫೂರ್ತಿಯನ್ನು ತುಂಬುವುದೇ ಈ ‘ಹೊಯ್ಸಳ ಮಾಲೆ’ ಯ ಧ್ಯೇಯ. ಇನ್ನು ಅನೇಕ ದಾನ ಶಾಸನಗಳು ಹೊಯಿಸಳ ಕರ್ನಾಟಕದ ಮನೆತನಗಳಲ್ಲಿ ಈಗಲೂ ಕಾಣಬರುತ್ತವೆ. ಈ ಗುಂಪಿನ ಜನರಲ್ಲಿ ಅನೇಕ ವಿದ್ವಾಂಸರು ಪ್ರಸಿದ್ಧ ವೈದ್ಯರು, ಪರಿಣತರಾದ ಸಂಗೀತಗಾರರೂ, ವಾದ್ಯ ನಿಪುಣರೂ ಇದ್ದರು. ಈ ಬಗ್ಗೆ ಚಾರಿತ್ರಿಕವಾಗಿ ಯಾವ ದಾಖಲೆಯೂ ಆಗದೆ ಎಲ್ಲಾ ಕತ್ತಲೆಯಲ್ಲಿ ಮುಳುಗಿಹೋಗಿದೆ. ಸಂಶೋಧನೆ ಮಾಡಿದರೆ ಅನೇಕ ವಿಷಯಗಳು ದೊರೆಯುತ್ತವೆ ಎಂದು ವಿಶ್ಲೇಷಿತವಾಗಿದೆ.
ಹಿರಿಯ ತಂತ್ರಜ್ಞ ಸಿ.ಆರ್. ಸತ್ಯ ಅವರು ವೃತ್ತಿಪರವಾಗಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪರಿಣಿತರು. ಐವತ್ತು ವರ್ಷಗಳಿಗೂ ಮೇಲ್ಪಟ್ಟು ಇವರು ಈ ಕ್ಷೇತ್ರದಲ್ಲಿ ಇಸ್ರೋ ಮತ್ತು ಟಾಟಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇವರು ಬರೆದಿರುವ ತಾಂತ್ರಿಕ ಮತ್ತು ವೈಜ್ಞಾನಿಕ ಲೇಖನಗಳು, ಮೈಸೂರು ವಿಶ್ವ ವಿದ್ಯಾಲಯದ ವಿಶ್ವಕೋಶದಲ್ಲಿ, ರಕ್ಷಣಾ ಇಲಾಖೆಯ ಪ್ರಕಟಣೆಗಳಲ್ಲಿ ವಿಜ್ಞಾನ ಲೋಕ ಹಾಗೂ ಉತ್ಥಾನ ಇಂತಹ ನಿಯತಕಾಲಿಕಗಳಲ್ಲಿ ಮತ್ತು ವೈಜ್ಞಾನಿಕ ಲೇಖನ ಸಂಕಲನಗಳ ಪುಸ್ತಕಗಳಲ್ಲಿ ಕಾಣಬಹುದು. ಸತ್ಯ ಅವರು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಇಲ್ಲಿ ವ್ಯಕ್ತಿ ಚಿತ್ರಗಳಿವೆ, ಜೀವನಾನುಭವಗಳಿವೆ, ಹಾಸ್ಯ ...
READ MORE