ಭಾರತದಲ್ಲಿ ವಿಶೇಷವಾಗಿ ಕನ್ನಡದಲ್ಲಿ ಸರೋಜಿನಿ ದೇವಿ ಜೀವನ ಚರಿತ್ರೆ ಕುರಿತು ಬಂದ ಗ್ರಂಥಗಳ ಸಂಖ್ಯೆ ಕಡಿಮೆ. ಈ ಕೊರತೆಯನ್ನು ಲೇಖಕ ಎಚ್.ಎಲ್. ನಾಗೇಗೌಡ ನೀಗಿಸಿದ್ದಾರೆ. ಭಾರತದಲ್ಲಿ ಇಷ್ಟೊಂದು ವಿವರಗಳುಳ್ಳ ಕೃತಿಯು ಮತ್ತೊಂದು ಭಾಷೆಯಲ್ಲಿ ಇಲ್ಲ ಎಂಬ ಪ್ರಶಂಸೆ ಈ ಕೃತಿಗೆ ಇದೆ. ಸರೋಜಿನಿ ದೇವಿ ನಾಯ್ಡು ಭಾರತದ ಕೋಗಿಲೆ ಎಂದೂ ಮಹಾತ್ಮ ಗಾಂಧೀಜಿ ಅವರಿಂದ ಪ್ರಂಶಸೆ ಬಂದಿದೆ.
ಕೃತಿಯಲ್ಲಿ ಬೇಕಿರುವುದು ಗಂಡಸಲ್ಲ; ಹೆಂಗಸು, ತಂದೆ-ತಾಯಿ, ಬಾಲ್ಯ-ವಿದ್ಯಾಭ್ಯಾಸ, ಶ್ರೀಮತಿ ನಾಯಿಡು, ಮಹಾತ್ಮನ ಪ್ರಥಮ ದರ್ಶನ, ಸರೋಜಿನಿಯಲ್ಲ; ಭಾರತದ ವೀರನಾರಿ, ಅಮೆರಿಕಾ-ಆಫ್ರಿಕಾ ದೇಶಗಳಲ್ಲಿ, ಬಾ ಇಲ್ಲದ ಬಾಪು, ಗವರ್ನರ್ ಅಲ್ಲ ಗವರ್ನೆಸ್, ರಾಷ್ಟ್ರಕ್ಕೆ ಕೊನೆಯ ವಂದನೆ ಹೀಗೆ ವೈವಿಧ್ಯಮಯವಾದ 20 ಅಧ್ಯಾಯಗಳಡಿ ಸರೋಜಿನಿ ನಾಯಿಡು ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟ ಮಹತ್ವದ ಕೃತಿ ಇದು.
ಜಾನಪದ ತಜ್ಞ, ಸಾಹಿತಿ, ದಕ್ಷ ಆಡಳಿತಗಾರರೆನಿಸಿದ್ದ ನಾಗೇಗೌಡರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯ ‘ದೊಡ್ಡಮನೆ’ ಕುಟುಂಬದಲ್ಲಿ. ತಂದೆ ಲಿಂಗೇಗೌಡ, ತಾಯಿ ಹುಚ್ಚಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಳೀಸಂದ್ರ ಹಾಗೂ ನಾಗತಿಹಳ್ಳಿಯಲ್ಲಿ ಮುಗಿಸಿದ ಅವರು ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚನ್ನರಾಯಪಟ್ಟಣದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿನಲ್ಲಿ ಇಂಟರ್ ಮೀಡಿಯೆಟ್, ಮೈಸೂರಿನಲ್ಲಿ ಬಿ.ಎಸ್ಸಿ, ಮತ್ತು ಪೂನದಲ್ಲಿ ಎಲ್.ಎಲ್.ಬಿ ಪದವಿ ಪಡೆದರು. ಮುನ್ಸೀಫ್ ಕೋರ್ಟಿನಲ್ಲಿ ಹೆಡ್ ಮುನ್ಷಿಯಾಗಿ ವೃತ್ತಿ ಆರಂಭಿಸಿದ್ದು ನರಸಿಂಹರಾಜಪುರದಲ್ಲಿ. ಆನಂತರ ಮೈಸೂರು ಸಿವಿಲ್ ಸರ್ವೀಸ್‌ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಇಲಾಖೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆಯಾದರು. ಅಲ್ಲದೆ ...
READ MORE