ನಳ ಚರಿತ್ರೆ, ಹರಿಭಕ್ತಿಸಾರ, ನೃಸಿಂಹಸ್ತವ, ರಾಮಧಾನ್ಯ ಚರಿತೆ ಹಾಗೂ ಮೋಹನ ತರಂಗಿಣಿ ಮುಂತಾದ ಮೇರು ಕಾವ್ಯಗಳನ್ನು ರಚಿಸಿದ ಕನಕದಾಸರ ಬದುಕು-ಸಾಗಿ ಬಂದ ದಾರಿ-ಜೀವನ ಕ್ರಮವನ್ನು ಈ ಕೃತಿ ವಿವರಿಸುತ್ತದೆ. ಮಕ್ಕಳಿಗಾಗಿ ಲೇಖಕ ಜ.ಹೋ. ನಾರಾಯಣ ಸ್ವಾಮಿ ರಚಿಸಿದ್ದು, ಸಾಹಿತಿ ನಾ. ಸೋಮೇಶ್ವರ ಸಂಪಾದಿಸಿದ್ದಾರೆ.
ಜ.ಹೊ.ನಾ ಎಂದೇ ಖ್ಯಾತರಾದ ಜ.ಹೊ.ನಾರಾಯಣಸ್ವಾಮಿ ಅವರು 13-06-1941ರಂದು ಹಾಸನ ತಾಲೂಕಿನ ಜನಿವಾರ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಹೊನ್ನಯ್ಯ, ತಾಯಿ ತಿಮ್ಮಮ್ಮ. ಮಹಾಕವಿ ಕುವೆಂಪುರವರ ಬೆರಳೆಣಿಕೆಯ ಆಪ್ತ ಶಿಷ್ಯ ವೃಂದದಲ್ಲಿ ಜ.ಹೊ.ನಾ ಪ್ರಮುಖರು. ಸಾಹಿತ್ಯ ವಲಯದಲ್ಲಿ ಆಲೋಚನೆಯ ದಾರಿದ್ರ್ಯ ಹಿಡಿದು ಸಂಪ್ರದಾಯ ನೇಣುಗಂಬಕ್ಕೆ ತುತ್ತಾದ ಸಂದರ್ಭದಲ್ಲಿ ಜ.ಹೊ.ನಾ ಅದಾರಾಚೆಯ ವೈಚಾರಿಕ ಲೋಕ ದರ್ಶನ ಮಾಡಿಸಿದವರು. ಮಾನವ ಕುಲಂ ತಾನೋಂದೇ ವಲಂ ಎನ್ನುವಂತೆ ವೇದ, ಕುರಾನ್ ಆಚೆಗೆ ನಮ್ಮನ್ನೆಲ್ಲಾ ಕೊಂಡೋಯ್ದು ಮಠ, ಮಂದಿರ, ಚರ್ಚ್, ಮಸೀದಿಗಳ ತೊರೆದು ಹೊರಬಂದು ಮಾನವೀಯ ಮೌಲ್ಯಗಳ ಆವಿರ್ಭವಿಸಿಕೊಳ್ಳುವಂತೆ ಕರೆನೀಡಿದ ಮಾನವತಾವಾದಿ ಜ.ಹೊ.ನಾ. ಪ್ರಾಥಮಿಕ ಶಿಕ್ಷಣದಿಂದ ...
READ MORE