ಲೇಖಕ ವಿಶ್ವನಾಥ ಶೆಟ್ಟಿ (ಪಾಂಗಾಳ) ಅವರು ಬರೆದ ಕೃತಿ-ಜಗದ್ಗುರು. ಮಹಾ ಸಂತ ತುಕಾರಾಮ ಅವರ ಜೀವನ ಸಂದೇಶ ಕುರಿತ ಒಂದು ಸಂಶೋಧನಾ ಗ್ರಂಥವಾಗಿದೆ. ತುಕಾರಾಮ ಅವರ ದಿವ್ಯತೆಯನ್ನು ಅಕ್ಷರ ರೂಪದಲ್ಲಿ ನೀಡಿದ ಕೃತಿ. ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಾರ ದೇವುದಾಸ ಶೆಟ್ಟಿ ಮುಂಬಯಿ ಅವರು ಕೃತಿಗೆ ಬೆನ್ನುಡಿ ಬರೆದು ‘ಮಾನವೀಯತೆಯನ್ನು ಪ್ರೀತಿಸಿ ಬದುಕಿದ ಸಂತ ತುಕಾರಾಮ ಅವರ ಜೀವನ ಸಮರ್ಪಣೆಯ ದಿವ್ಯ ಸಂದೇಶವನ್ನು ಲೇಖಕರು ಕನ್ನಡದಲ್ಲಿ ಸರಳವಾಗಿ ನೀಡಿದ್ದಾರೆ. ಮಾನವನ ನೋವನ್ನು ಅರಿತು, ಸಾಹಿತ್ಯದ ಮೂಲಕ ಮಾನಸಿಕ ದೃಢತೆಯನ್ನು ತುಂಬುವ ಸಂತರ ಕಳಕಳಿಯು ಲೇಖಕರ ಸಾಹಿತ್ಯದಲ್ಲೂ ಕಾಣಬಹುದು’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ವಿಶ್ವನಾಥ ಶೆಟ್ಟಿ (ಪಾಂಗಾಳ) ಅವರು ಮೂಲತಃ ಉಡುಪಿ ಜಿಲ್ಲೆಯ ಪಾಂಗಾಳದವರು. ತಂದೆ ಅಂತಯ್ಯಶೆಟ್ಟಿ, ತಾಯಿ ರಾಧಾ. ಪಾಂಗಾಳದಲ್ಲಿ ಪ್ರಾಥಮಿಕ ಹಾಗೂ ದಂಡತೀರ್ಥದಲ್ಲಿ ಪ್ರೌಢಶಿಕ್ಷಣ, ಮುಂಬೈಯ ಶಾರದಾ ವಿಜಯ ರಾತ್ರಿ ಶಾಲೆಯಲ್ಲಿ ಕಾಲೇಜು ಶಿಕ್ಷಣ ಪೂರೈಸಿದರು. ಬಾಹ್ಯ ವಿದ್ಯಾರ್ಥಿಯಾಗಿ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಬಿ.ಎ ಪದವೀಧರರು. ಇವರು ಬರೆದ ಕಥೆ,ಕವನ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪುಣೆಯಲ್ಲಿ ಬಂಟರ ಸಂಘದಿಂದ ಪ್ರಕಟವಾಗುವ ತ್ರೈಮಾಸಿಕ ‘ಕಲ್ಪವೃಕ್ಷ’ ಪತ್ರಿಕೆಯ ಸಂಪಾದಕರು. ಮರಾಠಿಗರಿಗೆ ಕನ್ನಡ ಕಲಿಸುವ ಚಟುವಟಿಕೆಯಲ್ಲಿ ಉತ್ಸುಕರು. ಪುಣೆಯಲ್ಲಿ ಕನ್ನಡ ಸಂಘ, ತುಳುಕೂಟದ ಸದಸ್ಯರು. ಶ್ರೀ ಅಯ್ಯಪ್ಪ ಸ್ವಾಮಿ ...
READ MORE