‘ಸಿಗ್ಮಂಡ್ ಫ್ರಾಯ್ಡ್’ ಆಸ್ಟ್ರಿಯಾದ ನರಶಾಸ್ತ್ರಜ್ಞರಾಗಿದ್ದು ಮನಃಶಾಸ್ತ್ರದ ಮನೋವಿಶ್ಲೇಷಣಾ ಪಂಥವನ್ನು ಆರಂಭಿಸಿದ ಖ್ಯಾತ ಮನಃಶಾಸ್ತ್ರಜ್ಞ. ಅವನ ಸಂಕೀರ್ಣ ವಿಚಾರಗಳ ಬಗ್ಗೆ ಏಳೆಎಳೆಯಾಗಿ ವಿಶ್ಲೇಷಿಸಿದ್ದಾರೆ. ಈ ಕೃತಿಯು 14 ಅನುಕ್ರಮಗಳಾದ ಆರಂಭಕ್ಕೆ ಮೊದಲು, ಮನೋವಿಶ್ಲೇ಼ಷಣೆಯ ಉಗಮ, ಕನಸುಗಳು, ಸುಪ್ತಚೇತನ, ಮನಃಶಕ್ತಿ ಮತ್ತು ಸಹಜ ಪ್ರವೃತ್ತಿಗಳು, ಮನೋಲೈಂಗಿಕ ವಿಕಾಸ, ವ್ಯಕ್ತಿತ್ವ ಸಿದ್ದಾಂತ, ಇಗೋವಿನ ರಕ್ಷಣಾತಂತ್ರಗಳು, ಫ್ರಾಯ್ಡ್ ನ ಅನುಯಾಯಿಗಳು, ಅಮೇರಿಕದಲ್ಲಿ ಫ್ರಾಯ್ಡ್, ಅನ್ವಯಿಕ ಮನೋವಿಶ್ಲೇಷಣೆ, ಫ್ರಾಯ್ಡ್ ನ ಕೊನೆಯ ದಿನಗಳು, ಫ್ರಾಯ್ಡ್ ನ ಸಿದ್ದಾಂತಗಳ ಮೌಲ್ಯಮಾಪನ, ಮುಗಿಸುವ ಮುನ್ನ ಇವೆಲ್ಲಾವುಗಳನ್ನು ಒಳಗೊಂಡಿದೆ. ಮಾನಸಿಕ ಅವಸ್ಥೆಯ ಬದಲಾವಣೆಗಳಿಗೆ ಸಂಬಂಧಿಸಿ ಫ್ರಾಯ್ಡ್ ಮುಂದಿಡುವ ವಿಚಾರಗಳನ್ನು ಲೇಖಕರು ಕನ್ನಡದ ಓದುಗರಿಗೆ ಸರಳವಾಗಿ ಕಟ್ಟಿಕೊಟ್ಟಿದ್ದಾರೆ.
ಎಂ.ಬಸವಣ್ಣ- ಹುಟ್ಟಿದ್ದು 1933, ಚಾಮರಾಜನಗರ ಜಿಲ್ಲೆಯ ಮಂಗಲ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಾಯೋಗಿಕ ಮನಃಶಾಸ್ತ್ರದಲ್ಲಿ 1955ರಲ್ಲಿ ಎಂ.ಎ.ಪದವಿ. ಕ್ಲಿನಿಕಲ್ ಮನಃಶಾಸ್ತ್ರದಲ್ಲಿ ನಿಮ್ಯಾನ್ಸ್ ನಿಂದ 1958ರಲ್ಲಿ ಡಿಪ್ಲೊಮಾ. 1970ರಲ್ಲಿ ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ. ಇದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇರಿ 1993ರಲ್ಲಿ ಪ್ರಾಧ್ಯಾಪಕರಾಗಿ ವಿಶ್ರಾಂತರಾದರು. ತಮ್ಮ ಸಂಶೋಧನಾ ಲೇಖನಗಳನ್ನು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಅಧ್ಯಾಪಕ ವೃತ್ತಿಯನ್ನು ಪ್ರೀತಿಸುವ ಬಸವಣ್ಣನವರು ವ್ಯಕ್ತಿತ್ವ ವಿಕಾಸದ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿ, ದೇಶದ ಉದ್ದಗಲಕ್ಕೂ ಉಪನ್ಯಾಸಗಳನ್ನು ಕಮ್ಮಟಗಳನ್ನು ನಡೆಸಿದ್ದಾರೆ. ಗುಲ್ಬರ್ಗಾ, ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ...
READ MORE