ಶ್ರೀ ಶೇಷಾಚಲ ಸದ್ಗುರುಗಳನ್ನು ಶ್ರೀ ಶೇಷಾಚಲ ಸಾಧುಗಳು ಹಾಗೂ ಅಗಡಿಯ ಸಾಧುಗಳೆಂದೂ ಪ್ರಸಿದ್ಧಿ. ಮುರಗೋಡದ ಶ್ರೀ ಚಿದಂಬರ ಮಹಾಸ್ವಾಮಿಗಳು ಇವರ ಗುರುಗಳು. ಗುರುನಾಥ ಹನುಮಂತ ಭಟ್ಟ ಬಾಳೀಹಳ್ಳಿ ಅವರು ಶ್ರೀಗಳ ಅಧ್ಯಾತ್ಮಕ ಬದುಕು-ಸಾಧನೆಗಳ ಕುರಿತು ದಾಖಲಿಸಿದ್ದಾರೆ. ’ಅಗಡಿ ಆನಂದವನದ ಸಾಧು ಶ್ರೇಷ್ಠ ಶ್ರೀ ಶೇಷಾಚಲ ಸದ್ಗುರುಗಳು’ ಕೃತಿಯಲ್ಲಿ ಸಚ್ಚರಿತ್ರೆ, ಪವಾಡಲೀಲೆಗಳು, ಶ್ರೀ ಶೇಷಾಚಲ ಸದ್ಗುರುಗಳ ಪರಮ ಶಿಷ್ಯೋತ್ತಮರು. ಮಹಾಮಹಿಮರ ಭೆಟ್ಟಿ, ಶ್ರೀ ಶೇಷಾಚಲ ಸದ್ಗುರು ಸಂಪ್ರದಾಯದ ಸಂಸ್ಥೆಗಳು, ಶ್ರೀ ಶೇಷಾಚಲ ಸದ್ಗುರುಗಳ ಸಂಸ್ಥೆಯ ಅಂಗಸಂಸ್ಥೆಗಳು, ಶ್ರೀ ಶೇಷಾಚಲ ಸದ್ಗುರುಗಳ ಸಚಿತ್ರ ದರ್ಶನ ಹೀಗೆ ಏಳು ಅಧ್ಯಾಯಗಳು ಕೃತಿಯಲ್ಲಿ ಇವೆ.