’ಶತಮಾನದ ಕವಿ ವಿಲಿಯಂ ಬ್ಲೇಕ್’ ಕೃತಿಯು ಯು. ಆರ್. ಅನಂತಮೂರ್ತಿ ಅವರು ಬರೆದಿರುವ ವಿಲಿಯಂ ಬ್ಲೇಕ್ ಅವರ ಜೀವನಚರಿತ್ರೆಯಾಗಿದೆ. ವಿಲಿಯಂ ಬ್ಲೇಕ್ ಲಂಡನ್ ನಿವಾಸಿ. ಇಲ್ಲಿ ಲೇಖಕ, ಕವಿ ವಿಲಿಯಂ ಬ್ಲೇಕ್ ಜೀವನದ ಬಗ್ಗೆ ವಿವರಿಸುತ್ತಾ ಆತನ ಕುಟುಂಬದ ಕುರಿತು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬ್ಲೇಕ್ ಶಾಲಾ ಔಪಚಾರಿಕ ಶಿಕ್ಷಣವನ್ನು ಪಡೆಯದಿದ್ದರೂ ಚಿತ್ರಕಲೆಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು ಅನ್ನುವ ವಿಚಾರವನ್ನು ಪ್ರಸ್ತುತಪಡಿಸುತ್ತಾ ಬ್ಲೇಕ್ ಬೆಳೆದಂತೆ ಆತನ ಆಸಕ್ತಿ ಹಾಗೂ ವಿಚಾರಗಳು ಬೆಳೆಯುತ್ತದೆ ಎಂದು ಹೇಳುತ್ತಾರೆ. ಚಿತ್ರಕಲಾ ವಿದ್ಯೆಯನ್ನು ವಿಲಿಯಂ ಬ್ಲೇಕ್ ಉತ್ತಮಪಡಿಸಿಕೊಂಡ ರೀತಿಯನ್ನು ವಿವರಿಸುತ್ತಾರೆ. ದೈವದ ಹಾಗೂ ಯಕ್ಷಿಯರ ದರ್ಶನಗಳನ್ನು ಕಾಣುತ್ತಿದ್ದನೆಂದು ಅವನೇ ಹೇಳಿಕೊಳ್ಳುವುದರ ಮೂಲಕ ಇಂಗ್ಲೆಡ್ ಕಂಡ ಒಬ್ಬ ಬಹುಮುಖ್ಯ ಅನುಭಾವಿ ಹಾಗೂ ದಾರ್ಶನಿಕ ಕವಿಯೆಂದು ಹೆಸರುವಾಸಿಯಾಗಿದ್ದಾನೆ. ಮನುಷ್ಯನೊಳಗಿರುವ ಒಳ್ಳೆತನ ಹಾಗೂ ಕೆಟ್ಟತನಗಳನ್ನು ಕುರಿತು ತನ್ನ ಕವಿತೆಗಳಲ್ಲಿ ಧ್ಯಾನಿಸಿದ್ದಾನೆ. ಗುಲಾಬಿಹೂವು , ಸೂರ್ಯಕಾಂತಿ ಹೂವು, ಮಗು, ಹುಲು, ಕುರಿಮರಿ, ಇವನ ಕವಿತೆಗಳಲ್ಲಿ ಕಾಣುವ ಬಹುಮುಖ್ಯ ರೂಪಕಗಳು ಎಂದಿದ್ದಾರೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE