ರಂಗ ಜಂಗಮ ಎಂದೇ ಖ್ಯಾತಿಯ ಸದಾನಂದ ಸುವರ್ಣ ಅವರ ಬದುಕು-ಸಾಧನೆ ಕುರಿತು ಸಮಗ್ರ ಚಿತ್ರಣ ನೀಡುವ ಕೃತಿ ಇದು. ರಂಗ ಪ್ರೀತಿ-ಸಾಂಗತ್ಯ, ನಿರ್ದೇಶನ ಮಟ್ಟು: ಸಮನ್ವಯತೆ ನೆಲೆಗಟ್ಟು, ರಂಗಕೃತಿ: ಅನನ್ಯ, ಅನ್ಯಾನ್ಯ, ಅಭಿನಯ ಅನುಭಾವ, ರಂಗ ಸಂಘಟನೆ: ಸಮರ್ಥ ನಾಯಕತ್ವ, ಸುವರ್ಣ ರಂಗ ಚಿಂತನೆ, ಸಾಹಿತ್ಯ, ಬೆಳ್ಳಿತೆರೆ: ಹೊಸ ಜಾಡಿನ ಸಂವೇದನೆ, ಸಮಾರೋಪ ರಂಗಭೂಮಿಯ ಜಂಗಮ ವಿಷಯಗಳ ಕುರಿತು ಮಾಹಿತಿ ನೀಡಲಾಗಿದೆ. ಸೀತಾಲಕ್ಷ್ಮೀ ಕರ್ಕಿಕೋಡಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
ಉತ್ತರ ಕನ್ನಡ ಮೂಲದ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಅವರು ಜನಿಸಿದ್ದು ದಕ್ಷಿಣ ಕನ್ನಡದ ಅಡ್ಯನಡ್ಕದಲ್ಲಿ. ಅಡ್ಯನಡ್ಕ, ಪುತ್ತೂರುಗಳಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾಭ್ಯಾಸ ಪೂರೈಸಿರುವ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದರು. 'ಮಾಸ್ತಿಯವರ ಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ' ಎಂಬ ಮಹಾಪ್ರಬಂಧ ರಚಿಸಿ ಹಂಪಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರಾಮರ್ಶೆ' ಎಂಬ ವಿಮರ್ಶಾ ಸಂಕಲನ ಪ್ರಕಟಿಸಿರುವ ಅವರು 'ವಿಜಯ ಕರ್ನಾಟಕ' ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. 12-05-2020 ರಂದು ಸೀತಾಲಕ್ಷ್ಮಿ ಅವರು ನಿಧನರಾದರು. ...
READ MORE