ಸಂಸ ಅವರ ನಿಜವಾದ ಹೆಸರು ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್. ತಂದೆ ನರಸಿಂಹ ಪಂಡಿತರು, ತಾಯಿ ಗೌರಮ್ಮ. ಹುಟ್ಟೂರು ಯಳಂದೂರು ತಾಲೂಕಿನ ಅಗರ. ಸಂಸರು ತಮ್ಮದೇ ಹೆಸರನ್ನು ಸ್ವಲ್ಪ ಬದಲಾಯಿಸಿ ತಮ್ಮ ಕೃತಿಗಳನ್ನು ಪ್ರಕಟಿಸುತ್ತಿದ್ದರು. ಅವರ ವಿಗಡ ವಿಕ್ರಮರಾಯ ನಾಟಕಕ್ಕೆ ‘ಕಂಸ’ ಎಂಬ ಕಾವ್ಯನಾಮದಿಂದ ಪ್ರಕಟಣೆಗೆ ನೀಡಿದಾಗ ಅದು ತಪ್ಪಾಗಿ “ಸಂಸ” ಎಂದಾಯಿತಂತೆ. ಆ ಹೆಸರೇ ಅವರ ಕಾವ್ಯನಾಮವಾಗಿ ಶಾಶ್ವತವಾಗಿ ಉಳಿದು ಕೊಂಡಿತು. "ಸಂಸ ಪದಂ" ಎಂಬ ಪದ್ಯ ಸಂಗ್ರಹವು ಧಾರವಾಡದಲ್ಲಿ ಪ್ರಕಟವಾಯಿತು. 'ಬೆಟ್ಟದರಸು', 'ಮಂತ್ರಶಕ್ತಿ' ಮತ್ತು 'ವಿಜಯ ನಾರಸಿಂಹ' ಎಂಬ ಮೂರು ಐತಿಹಾಸಿಕ ನಾಟಕಗಳು ಹಸ್ತಪ್ರತಿಗಳಾಗಿ ಇನ್ನೂ ಇವೆ. ಕೌಶಲ, ಷರ್ಲಾಕ್ ಹೋಮ್ಸ್ ಇನ್ ಜೈಲ್ -ಇವು ಅವರ ಕಾದಂಬರಿಗಳು. ಇಂತಹ ವ್ಯಕ್ತಿಯ ಜೀವನ ಚರಿತ್ರೆ ಕಟ್ಟಿಕೊಟ್ಟ ಕೃತಿ ಇದು.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE