`ಅಕ್ಕರೆಯ ಅಪ್ಪುಗೆ’ ಕೃತಿಯು ಸಚಿನ್ ಕೃಷ್ಣ ಅವರು ಪುನೀತ್ ರಾಜ್‌ಕುಮಾರ್ ಬಗ್ಗೆ ಬರೆದ ಕೃತಿ. ದೈಹಿಕವಾಗಿ ವ್ಯಕ್ತಿ ನಮ್ಮಿಂದ ಅಗಲಿದರೂ ಆ ವ್ಯಕ್ತಿಯ ನೆನಪು, ಅವರೊಂದಿಗಿನ ಅನುಭವ, ಆತ ಮಾಡಿದ ಸೇವೆ ಎಲ್ಲವೂ ಚಿರಕಾಲ ಉಳಿಯುತ್ತದೆ. 2021 ಕನ್ನಡಿಗರ ಪಾಲಿಗಂತೂ ಬ್ಯಾಡ್ ಇಯರ್. ನಮ್ಮೆಲ್ಲರ ಅಚ್ಚುಮೆಚ್ಚಿನ ಅಪ್ಪು ನಮ್ಮನ್ನು ಹಠಾತ್ ಬಿಟ್ಟುಹೋದರು. ಆ ದುಃಖ ಇನ್ನೂ ಕಾಡುತ್ತಲೇ ಇದೆ. ಪ್ರತಿಬಾರಿ ಅವರ ಸಮಾಧಿಯನ್ನು ಕಂಡಾಗಲೆಲ್ಲ ನಿಜಕ್ಕೂ ಇದು ನಿಜವೇ ಅನ್ನಿಸುತ್ತದೆ. ನಮ್ಮೊಳಗಿನ ದುಃಖವನ್ನು ನಾವೇ ನುಂಗಿ ಬದುಕು ದೂಡಬೇಕು. ಅಭಿಮಾನಿಗಳ ಸ್ಥಿತಿಯೇ ಈ ಮಟ್ಟಿನದಾದರೆ ಇನ್ನು ಅವರ ಕುಟುಂಬದ್ದು ಹೇಳತೀರದ ಸಂಕಟ ಎಂದಿದ್ದಾರೆ ಇಲ್ಲಿ ಲೇಖಕರು.
ಲೇಖಕ ಸಚಿನ್ ಕೃಷ್ಣ ಅವರು ಮೂಲತಃ ಬೆಂಗಳೂರಿನವರು. ಪ್ರಾಥಮಿಕ ಶಿಕ್ಷಣವನ್ನು ಕುಣಿಗಲ್ ಮತ್ತು ಕೋಲಾರದಲ್ಲಿ, ಪ್ರೌಢಶಿಕ್ಷಣವನ್ನು ಬೆಂಗಳೂರಿನ ಅಗ್ರಹಾರದ ದಾಸರಹಳ್ಳಿಯ ಸರ್ಕಾರಿ ಶಾಲೆಯಲ್ಲಿ , ಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ, ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿಯನ್ನು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡದಿದ್ದಾರೆ. ಕನ್ನಡ ವಿಷಯದಲ್ಲಿ ಮೂರು ಚಿನ್ನದ ಪದಕವನ್ನು ಪಡೆದಿರುವ ಅವರು ಅಗ್ನಿ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿಜೀವನವನ್ನು ಆರಂಭಿಸಿ, ‘ವಿಜಯ ಕರ್ನಾಟಕದಲ್ಲಿ’ ಪತ್ರಿಕಾ ತರಬೇತಿ, ‘ವಿಶ್ವವಾಣಿ’ ಪತ್ರಿಕೆಯ ಪುರವಣಿ ವಿಭಾಗದಲ್ಲಿ ಉಪಸಂಪಾದಕ, ‘ಸಿನಿಬಜ್’ ವೆಬ್ ಸೈಟ್ ನಲ್ಲಿ ಉಪಸಂಪಾದಕರಾಗಿ ಕೆಲಸ. ದ್ರಾವಿಡ ವಿಶ್ವವಿದ್ಯಾಲಯದ ...
READ MORE