ಕರ್ನಾಟಕ ಯುಗಪುರುಷ ಪಂ. ತಾರಾನಾಥರು

Author : ಲಕ್ಷ್ಮೀದೇವಿ ಶಾಸ್ತ್ರಿ

Pages 370

₹ 350.00




Year of Publication: 2021
Published by: ವಿಶ್ವ ಪ್ರಕಾಶನ
Address: #15/ಅ, 101 ಸಮರ್ಥರಾಮದಾಸ ಧಾಮ, 4ನೇ ಕ್ರಾಸ್ ಶಿವಲಿಂಗಯ್ಯ ಕಾಲನಿ, ಬೆಂಗಳೂರು-560017
Phone: 8197195027

Synopsys

‘ಕರ್ನಾಟಕ ಯುಗಪುರುಷ ಪಂ.ತಾರಾನಾಥರು’  ಲೇಖಕಿ ಲಕ್ಷ್ಮೀದೇವಿ ಶಾಸ್ತ್ರಿ ಅವರ ಕೃತಿ. ತಾರಾನಾಥರ ಜೀವನ ಸಾಧನೆಗಳ ಆಕರ ಗ್ರಂಥವಾಗಿದೆ. ಪಂ.ತಾರಾನಾಥರ ಮ್ಯೂಸಿಯಂನಲ್ಲಿರುವ ಎಲ್ಲಿಯೂ ದಾಖಲಿಸಿದ ವಿಷಯಗಳು ಹಾಗೂ ವಿವಿಧ ಮೂಲಗಳಿಂದ ಸಂಗ್ರಹಿಸಿದ ಪಂ.ತಾರಾನಾಥರೊಂದಿಗೆ ಒಡನಾಡಿದವರ, ಸಂಬಂಧಕರೊಂದಿಗಿನ ಮನದಾಳದ ಮಾತುಗಳು ಈ ಕೃತಿಯಲ್ಲಿ ಮಾತನಾಡಿವೆ.

ಕೃತಿಗೆ ಬೆನ್ನುಡಿ ಬರೆದಿರುವ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ್ ವಿ. ಪಾಟೀಲ್ ಅವರು, ಪಂ.ತಾರಾನಾಥರ ಬಹುಮುಖಗಳನ್ನು ಲೇಖಕಿಯು ಪರಿಣಾಮಕಾರಿಯಾಗಿ ಪರಿಚಯಿಸಿದ್ದಾರೆ. ಪಂ. ತಾರಾನಾಥರ ಬದುಕು, ಸಂಘರ್ಷ, ಹೋರಾಟ, ದೇಶಭಕ್ತಿ, ಸಾಮಾಜಿಕ ಚಿಂತನೆ, ಶಿಕ್ಷಣ, ಸಾಹಿತ್ಯ, ಸಂಗೀತ ಮತ್ತು ಇನ್ನಿತರ ಕ್ಷೇತ್ರಗಳಿಗೆ ಅವರ ಕೊಡುಗೆಯನ್ನು ಈ ಪುಸ್ತಕದಲ್ಲಿ ನೋಡಬಹುದು. ಜೀವನ - ಆದರ್ಶಕ್ಕೆ ಆಡಂಬರಕ್ಕಲ್ಲ ಸಾರ್ಥಕತೆಗೆ ಪ್ರದರ್ಶನಕ್ಕಲ್ಲ, ಪ್ರಯೋಜನೆಗೆ ಪ್ರಚಾರಕ್ಕಲ್ಲ. ಪ್ರೀತಿಸುವುದಕ್ಕೆ ದ್ವೇಷಕ್ಕಲ್ಲ, ಬಾಳಿ ಬದುಕುವದಕ್ಕೆ ಬೀಗಿ ಹಾಳಾಗುವುದಕ್ಕಲ್ಲ, ಮನೋವಿಕಾಸಕ್ಕೆ ಕೇವಲ ಮನೋರಂಜನೆಗಲ್ಲ ಹಾಗೂ ಅರ್ಥಪೂರ್ಣ ಮಾಡುವದಕ್ಕೆ ವ್ಯರ್ಥ ಮಾಡುವದಕ್ಕಲ್ಲ ಎಂಬುದನ್ನು ಮನಗಾಣಬಹುದಾಗಿದೆ. ನಾನೂ ಕೂಡ ಪಂ.ತಾರಾನಾಥರು ಸ್ಥಾಪಿಸಿದ ಹಮದರ್ದ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದೆ ಎಂದು ಹೇಳಲು ಅಭಿಮಾನಪಡುತ್ತೇನೆ. ಇಂತಹ ಮಹತ್ವದ ಕೃತಿಯನ್ನು ಸಂಘಟಿಸಿ ಸಂಶೋಧನೆ ಮಾಡಿ, ಸಂಯೋಜಿಸಿ ಅನೇಕ ಕಡೆ ಪ್ರವಾಸ ಮಾಡಿ, ವಿಷಯ ಮತ್ತು ಸಚಿತ್ರ ದಾಖಲೆಗಳನ್ನು ಸಂಗ್ರಹಿಸಿ ಪರಿಶ್ರಮದಿಂದ ಈ ಕೃತಿಯನ್ನು ರಚಿಸಿದ್ದಾರೆ ಲೇಖಕಿ ಲಕ್ಷ್ಮೀದೇವಿ ಶಾಸ್ತ್ರೀ. ಈ ಪುಸ್ತಕ ಮುಂಬರುವ ಪೀಳಿಗೆಗೆ ಅನೇಕ ವಿಷಯಗಳಿಗೆ ದಾರಿದೀಪವಾಗಬಹುದು. ಅಮೂಲ್ಯವಾದ ಅನುಭವ ಮತ್ತು ಆಳವಾದ ಜ್ಞಾನವನ್ನು ತಲೆಯಲ್ಲಿ ಇಟ್ಟುಕೊಂಡರೆ ಅದು ಸಂಗ್ರಹದ ಕೋಣೆ, ಅವುಗಳನ್ನು ಹಂಚಿಕೊಂಡಾಗ ಅವು ಇತರರಿಗೆ ದಾರಿದೀಪಗಳಾಗುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಲಕ್ಷ್ಮೀದೇವಿ ಶಾಸ್ತ್ರಿ
(02 August 1950)

ಲೇಖಕಿ ಲಕ್ಷ್ಮೀದೇವಿ ಶಾಸ್ತ್ರಿ ಅವರು ಗುಲಬರ್ಗಾ ಜಿಲ್ಲೆಯ ಶಹಾಬಾದದವರು.  02-08-1950 ರಂದು ಜನನ.  ತಂದೆ ಶಿವಬಸಯ್ಯ ನಂದೀಧ್ವಜ, ತಾಯಿ ರಾಚಮ್ಮ ನಂದೀಧ್ವಜ.. ಎಂ.ಎ., ಬಿ.ಇಡಿ ಪದವೀಧರರು. ನಿವೃತ್ತ ಉಪನ್ಯಾಸಕಿ.  ಕೃತಿಗಳು: ನಾಲ್ಕು ಸಾಲು, ಮರೀಚಿಕೆ (1985), ಮೌನ ಮಿಡಿದಾಗ (2012) ಇವು ಕವನ ಸಂಕಲನಗಳು, ಪಂ. ತಾರಾನಾಥರು 1992), ಎಲ್ಲಾ ನಿನ್ನ ಹೆಸರಲ್ಲಿ, ಸುಸಂಸ್ಕೃತರು, ಹೃದಯಕ್ಕೆ ಹತ್ತಿರಾದವರು ಮತ್ತು ಇತರ ಕಥೆಗಳು, ರಾಯಚೂರು ಕೋಟೆ (ಕಥಾ ಸಂಕಲನಗಳು),  ನಮ್ಮವರು (ಚಿಂತನ ಸಂಕಲನ), ಹೊಂಗಿರಣ (ಲೇಖನ ಸಂಕಲನ) ಕೃತಿಗಳನ್ನು ಪ್ರಕಟಿಸಿದ್ದಾರೆ. ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ (2002) ರಾಯಚೂರು ಜಿಲ್ಲೆ 2ನೇ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅಖಿಲ ...

READ MORE

Related Books