ಗಾಂಧೀಜಿ ವಿಚಾರಧಾರೆ ಕುರಿತ ಕೃತಿ ‘ಗಾಂಧೀಗಿರಿ’. ಈ ಕೃತಿಯನ್ನು ಲೇಖಕ, ಅನುವಾದಕ ಕಾಶೀನಾಥ ಅಂಬಲಗೆ ಅವರು ರಚಿಸಿದ್ದಾರೆ. ಮಹಾತ್ಮಾ ಗಾಂಧೀಜಿಯವರ ಕುರಿತು ವಿಶ್ವದೆಲ್ಲೆಡೆ ವಿಪುಲ ಸಾಹಿತ್ಯ ಬಂದಿದೆ. ಲಕ್ಷ ಲಕ್ಷ ಗ್ರಂಥಗಳು ಗಾಂಧೀಜಿಯವರ ಕುರಿತು ಬೇಕಾದಷ್ಟು ಮಾತಾಡಿವೆ. ಹೆಚ್ಚು ಕಡಿಮೆ ಎಲ್ಲ ಗ್ರಂಥಗಳು ಯುವಪೀಳಿಗೆಯ ವ್ಯಕ್ತಿತ್ವ ರೂಪಿಸಲು ಮೂಡಿ ಬಂದಿವೆ ಎಂದೇ ಹೇಳಿಕೊಂಡಿವೆ. ಆಧುನಿಕ ಯುಗದಲ್ಲಿ ಜಗತ್ತಿನ ಹೆಚ್ಚಿನ ಚಿಂತಕರನ್ನು ಪ್ರಭಾವಿಸಿದ ಮನುಷ್ಯ ಗಾಂಧೀಜಿ. ಇಲ್ಲಿಯ ಗಾಂಧಿ ವಿಚಾರಧಾರೆ ಹಾಗೂ ಬೇರೆ ಬೇರೆ ಓದಿನ ದಾರಿಯ ಗಾಂಧಿ ವಿಚಾರಗಳು ಒಂದೆಡೆ ಸೇರಿಸಿ ನೇರವಾಗಿ ಮಹಾತ್ಮ ಗಾಂಧೀಜಿಯವರ ವಿಚಾರಗಳ ದಾರಿದೀಪಗಳು ಈ ಪುಸ್ತಕದ ಮೂಲಕ ಓದುಗರ ಮುಂದಿಡುವ ಪ್ರಯತ್ನ ಇಲ್ಲಿ ಲೇಖಕರು ಮಾಡಿದ್ದಾರೆ.
ಕಾಶೀನಾಥ ಅಂಬಲಗಿ ಅವರ ಕೆಲ ಬರಹಗಳು ಕನ್ನಡ-ಹಿಂದಿ ಎರಡೂ ಭಾಷೆಗಳಲ್ಲಿ ಮಾತಾಡಲು ಹಪಹಪಿಸುತ್ತವೆ. ಎರಡೂ ಭಾಷೆಯ ಓದುಗರಿಗೆ ತಲುಪುವಂತಾಗಿ ಭಾರತೀಯ ಜನಪರ ಮನಸುಗಳು ಇತ್ಯಾತ್ಮಕವಾಗಿ ಆಲೋಚಿಸುವಂತಾದರೆ ಎಷ್ಟು ಚಂದ!
ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ. ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...
READ MORE