ಡಾ. ಕೊಂಡಾವೀಟಿ ಮುರುಳೀ ಅವರು ಮೂಲ ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಅನುವಾದಕ ಮಹಾಂತೇಶ ಬಿದರಿಮಠ ಕನ್ನಡಕ್ಕೆ ಅನುವಾದಿಸಿದ ಕೃತಿ-ಮೇರಿ ಕೋಮ್. ಭಾರತದ ಈಶಾನ್ಯಕ್ಕಿರುವ ಮಣಿಪುರ ರಾಜ್ಯದಲ್ಲಿ ಕೋಮ್ ಎಂಬ ಬುಡಗಟ್ಟು ಜನಾಂಗವಿದ್ದು, ಆ ಜನಾಂಗಕ್ಕೆ ಸೇರಿದ ಬಾಕ್ಸಿಂಗ್ ಕ್ರೀಡಾಪಟು-ಮೇರಿ ಕೋಮ್. 2012ರ ಸಮ್ಮರ್ ಒಲಂಪಿಕ್ಸ್‌ನಲ್ಲಿ ಬಾಕ್ಸರ್ ಆಗಿ ಪ್ರವೇಶ ಕ್ರೀಡೆಗೆ ಪ್ರವೇಶ ಪಡೆದ ಮೇರಿ ಕೋಮ್, ಆಗ ಕಂಚಿನ ಪದಕ ಪಡೆದು, 2014ರಲ್ಲಿ ಏಷಿಯನ್ ಗೇಂನಲ್ಲಿ ಸುವರ್ಣ ಪದಕ ಹಾಗೂ ಆರು ವರ್ಲ್ಡ್ ಮಹಿಳಾ ಚಾಂಪಿಯನ್‌ಶಿಪ್ ಗಳಲ್ಲಿಯೂ ಪದಕ ಪಡೆದ ಅಗ್ರಗಣ್ಯ ಕ್ರೀಡಾಪಟು. ಮಹಿಳಾ ಆಟಗಾರ್ತಿಯಾಗಿ 2002, 2003, 2004, 2006ರಲ್ಲಿ ಕ್ರಮವಾಗಿ ಟರ್ಕಿ, ಹಂಗೇರಿ, ನಾರ್ವೆ, ಟೈವಾನ್, ಡೆನ್ಮಾರ್ಕ್, ರಷ್ಯಾ, ಕಝಕಿಸ್ತಾನಗಳಲ್ಲಿ ಭಾಗವಹಿಸಿ ಅನೇಕ ಸ್ವರ್ಣಪದಕಗಳನ್ನೂ, ಪ್ರಶಸ್ತಿಗಳನ್ನೂ ಪಡೆದಿದ್ದು, ವಿಶ್ವಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದ್ದಾಳೆ. ಈಕೆಯ ಮೂಲ ಪೋಟೋಗಳೊಂದಿಗೆ ಸ್ಫೂರ್ತಿದಾಯಕ ಉಲ್ಲೇಖಗಳಿರುವುದು ಈ ಕೃತಿಯ ವಿಶೇಷತೆ.
ಮಹಾಂತೇಶ ಬಿದರಿಮಠ ಲೇಖಕರು. ಗಣ್ಯ ವ್ಯಕ್ತಿ-ಸಾಧಕರ ಜೀವನ ಚಿತ್ರಣ ನೀಡುವಲ್ಲಿ ಆಸಕ್ತರು. ಉತ್ತಮ ಅನುವಾದಕರು. ಕೃತಿಗಳು: ಇಂದಿರಾ ಗಾಂಧಿ : ವೈಯಕ್ತಿಕ ಮತ್ತು ರಾಜಕೀಯ ಜೀವನಚರಿತ್ರೆ (ಅನುವಾದ), ಮೇರಿ ಕೋಮ್, ಸ್ಟೀವ್ ಜಾಬ್ಸ್ ...
READ MORE