ರಾಜ್‌ಕುಮಾರ್ ಕನ್ನಡ ಚಲನಚಿತ್ರದ ಎವರ್‌ಗ್ರೀನ್ ಹೀರೊ. ಸಾಧನೆಯ, ಕಲಾವಿದನಾಗಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿದರು. ಅವರ ಸಿಂಪ್ಲಿಸಿಟಿ ಇಂದಿಗೂ ಪ್ರತಿಯೊಬ್ಬರಿಗೂ ಆದರ್ಶ. ಹುಟ್ಟೂರು, ಓಡಾಡಿದ ಜಾಗ ಗುರುತು ಮಾಡಿ, ಅವರಿಟ್ಟ ಹೆಜ್ಜೆ ಗುರುತುಗಳ ಮೇಲೆ ಮತ್ತೆ ಮತ್ತೆ ನಮ್ಮ ಹೆಜ್ಜೆ ಊರುತ್ತಾ, ಉರುಳು ಸೇವೆ ಮಾಡುತ್ತಿದ್ದ ನಂಜನಗೂಡಲ್ಲಿ ಅಲೆದಾಡುತ್ತಾ, ಇಷ್ಟಪಟ್ಟು ತಿನ್ನುತ್ತಿದ್ದ ಹೋಟೆಲ್‌ಗಳೆಲ್ಲ ಹುಡುಕಾಡುತ್ತಿದ್ದಾಗ ಅರ್ಥವಾಗಿದ್ದು ಏನೆಂದರೆ, ರಾಜಕುಮಾರ, ಸಿಂಪಲ್ ಸೂತ್ರಧಾರ ಮತ್ಯಾರು ಅಲ್ಲ, ಕೊನೆತನಕ ಅವರೊಳಗಿದ್ದ ಮುತ್ತುರಾಜನೇ ಅನ್ನೋದು. ಹೀಗೆ ರಾಜ್‌ಕುಮಾರರ ವ್ಯಕ್ತಿತ್ವದ ಘನತೆ ಕುರಿತು ವಿವರಿಸಿರುವ ಈ ಕೃತಿ, ರಾಜ್‌ಕುಮಾರ್ ಅಭಿಮಾನಿಗಳು ಓದಲೇಬೇಕು.
ಯಾವ ನಟರೇ ಆಗಲಿ, ವೃತ್ತಿ ಜೀವನಕ್ಕೆ ಕಾಲಿಡುವ ಆರಂಭದಲ್ಲಿ ಅವರೊಳಗಿರುವ ಮುಗ್ಧತೆ, ಆ ವ್ಯಕ್ತಿತ್ವ ಆಮೇಲಾಮೇಲೆ ಇವೆಲ್ಲವೂ ಮಾಯವಾಗುತ್ತಿರುವ ಸಂದರ್ಭದಲ್ಲಿ ಚಲನಚಿತ್ರ ರಂಗದವರು ಓದಿ, ಸರಳತೆಯ ಮಹತ್ವ ತಿಳಿದುಕೊಳ್ಳಬೇಕಿದೆ.
ಸಿನಿಮಾದಲ್ಲಿ ಪಾರ್ಟ್ ಕೇಳಿಕೊಂಡು ಅಪ್ಪನ ಜೊತೆ ಮದರಾಸಿಗೆ ಹೋದಾಗ ಇದ್ದ ಮುಗ್ಧತೆ, ರಾಜಕುಮಾರನಾಗಿ, ಹೆಸರು, ಹಣ, ಜನಪ್ರಿಯತೆ ಎಲ್ಲ ಗಳಿಸಿದ ಮೇಲೂ ಆಂತರ್ಯದಲ್ಲಿ ಹಾಗೇ ಬದುಕಿದ್ದರು. ನಮಗೆಲ್ಲಾ ಸಿಂಪಲ್ ಆಗಿ ಕಾಣ್ತಾ ಇದ್ದದ್ದು ರಾಜಕುಮಾರರಾದರೂ ಅದಕ್ಕೆ ಕಾರಣೀಭೂತರು ಈ ಮುತ್ತುರಾಜ್. ಸಿಂಪಲ್‌ಗೆ ಸ್ಯಾಂಪಲ್ ಆಗಿರೋ ಅವರನ್ನು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ ಲೇಖಕರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದವರಾದ ಕಟ್ಟೆ ಗುರುರಾಜ್ ವೃತ್ತಿಯಲ್ಲಿ ಪತ್ರಕರ್ತರು. ತಂದೆ - ಕೆ.ರಾಮಚಂದ್ರರಾವ್, ತಾಯಿ ಸಾವಿತ್ರಮ್ಮ. ಊರಲ್ಲೇ ಪ್ರಾಥಮಿಕ ಶಿಕ್ಷಣ ಹಾಗೂ ಪದವಿ ಶಿಕ್ಷಣ ಪಡೆದ ಇವರು, ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಮೈಸೂರು ವಿವಿ, ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ವೃತ್ತಿ ಸೇರಿದ ಮೇಲೆ ಸಂಗೀತ, ಓದು, ಬರಹ, ಚಿತ್ರಕಲೆ, ಸಿನಿಮಾ, ಸುತ್ತಾಟ ಇವರ ಪ್ರವೃತ್ತಿ. ಕಳೆದ 16 ವರ್ಷಗಳಲ್ಲಿ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭದಲ್ಲಿ ಕಾರ್ಯನಿರ್ವಹಿಸಿರುವ ಇವರು ಪ್ರಸ್ತುತ ಉದಯವಾಣಿಯಲ್ಲಿ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. 'ಕರಗುತಿರುವ ಹಿಮಾಲಯದ ನೀರ್ಗಲ್ಲುಗಳು' ಬರಹಕ್ಕೆ 2008ರ ‘ಚರಕ ಪ್ರಶಸ್ತಿ’ ...
READ MORE