ಡಾ. ಪಿ.ಕೆ. ರಾವ್ ಅವರ 75 ರ ಜನ್ಮ ದಿನದಂಗವಾಗಿ ಪ್ರಕಟಿಸಿದ ಸ್ಪಂದನ ಸಂಪುಟ-ನಮ್ಮ ಡಾಕ್ಟ್ರು. ಡಾ. ಪಿ.ಕೆ.ರಾವ್ ಅವರ ವ್ಯಕ್ತಿಗತ ಹಾಗೂ ವೃತ್ತಿಪರ ಬದುಕಿನ ಒಲವು-ನಿಲುವುಗಳನ್ನು ಸಾಹಿತಿ ನಾ. ಡಿಸೋಜ ಅವರು ದಾಖಲಿಸಿದ ಕೃತಿ ಇದು. ವೈದ್ಯರಾಗಿ ಉದ್ಯೋಗ ವಲಯದಲ್ಲಿ ಎತ್ತರದ ಸ್ಥಾನ ಹಾಗೂ ಜನಪ್ರಿಯತೆಯನ್ನು ಹೊಂದಿದ್ದರೂ ಸರಳ ನಡೆ-ನುಡಿಗಳು ಅವರ ವ್ಯಕ್ತಿತ್ವಕ್ಕೆ ಕಳಸವಿಡುವಂತಿವೆ. ಇವರದ್ದು ಮಾದರಿಯ ಹಾಗೂ ಅನುಕರಣೀಯ ಬದುಕು ಎಂಬುದನ್ನು ಲೇಖಕರು ಇಲ್ಲಿ ಕಾಣಿಸಿದ್ದಾರೆ.
ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಅವರು 2025 ಜ. 05 ಭಾನುವಾರದಂದು ನಿಧನರಾದರು. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ...
READ MORE