ರವೀಂದ್ರ ಭಟ್ಟ ಅವರ ಕೃಇ ‘ಹೆಜ್ಜೇನು’. ಜೇನು ಕುರುಬ ಜಾತಿಗೆ ಸೇರಿದ ಜಾಜಿ ತಿಮ್ಮಯ್ಯ ಅವರ ಆತ್ಮಕತೆ, ಅವರ ಹೋರಾಟಗಳ ಬಗೆಗಿರುವ ಕೃತಿ ಇದು. ಈ ಕೃತಿಗೆ ಡಾ.ಮುಜಾಫರ್ ಅಸ್ಸಾದಿ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಜೇನು ಸವಿಯದ ಮುನ್ನ, ಹಾಡು ಹಳಸಲಾದ ಹೊತ್ತು, ಮುತ್ತೂರಿಗೆ ಬಂದ ಮದುವಣಗಿತ್ತಿ, ಅರಿವು ತಂದ ಅಕ್ಷರ ಲೋಕ, ಸೋನಿಯಾ ಮೆಚ್ಚಿದ ಮೌನ ನಾಯಕಿ, ಹೋರಾಟದ ಹಾದಿಗೆ ಸಾವಿರಾರು ನದಿಗಳು, ಕಂಬಿ ಕಿತ್ತ ತಾಜ್, ಮತ್ತೆ ತುಂಬಿತು ಆತ್ಮವಿಶ್ವಾಸದ ಅಂತರ್ಜಲ, ಮುತ್ತಗದೆಲೆಯ ಮಾಂಸದೂಟಕ್ಕೆ ಬಾ ಬಿರ್ಸಾಮುಂಡ ಎಂಬ ಶೀರ್ಷಿಕೆಗಳು ಈ ಸಂಕಲನದಲ್ಲಿವೆ.
ಹಿರಿಯ ಪತ್ರಕರ್ತ, ಲೇಖಕ ರವೀಂದ್ರ ಭಟ್ಟ ಅವರು ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 1990ರಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಆರಂಭಿಸಿದ ಅವರು ನಂತರ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿಗಳಲ್ಲಿ ಸೇವೆ ಸಲ್ಲಿಸಿದ್ದು, 1995ರಿಂದ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಇವರೇ ಬರಮಾಡಿಕೊಂಡ ಬರ’, ‘ಹೆಜ್ಜೇನು’ (ಆದಿವಾಸಿ ನಾಯಕಿ ಜಾಜಿ ತಿಮ್ಮಯ್ಯ ಅವರ ಜೀವನ ಚರಿತ್ರೆ), ‘ಬದುಕು ಮರದ ಮೇಲೆ’, ‘ಮೂರನೇ ಕಿವಿ’, ‘ಸಂಪನ್ನರು’, ‘ಅಕ್ಷಯ ನೇತ್ರ’, ...
READ MORE