ನಾಗಮಣಿ ಎಸ್. ರಾವ್

Author : ಗೀತಾ ಶೆಣೈ

Pages 52

₹ 60.00




Year of Publication: 2018
Published by: ನಿರಂತರ ಸಾಯಿ ಕಮ್ಯೂನಿಕೇಷನ್‌
Address: #1572, 7ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು
Phone: 9632812541

Synopsys

ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯುಳ್ಳ ನಾಗಮಣಿ ಎಸ್. ರಾವ್ ಅವರು ಮಹಿಳಾ ಮತ್ತು ಮಕ್ಕಳ ಸಾಹಿತ್ಯ ರಚನೆಯಲ್ಲಿ ಸಕ್ರಿಯರು. ರಾಜ್ಯ ವಿಧಾನಮಂಡಲದ ಕಾರ್ಯಕಲಾಪಗಳನ್ನು ವರದಿ ಮಾಡಿದ ಪ್ರಥಮ ಮಹಿಳಾ ಪತ್ರಕರ್ತೆ. 'ಆಕಾಶವಾಣಿ ಪ್ರದೇಶ ಸಮಾಚಾರ'ದ ವಾರ್ತಾವಾಚಕಿ ವಿಧಾನಸಭಾ ಚುನಾವಣೆಯ ಆ್ಯಂಕರ್‌ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರು ಆಗಿದ್ದ ಅವರು “ಸ್ತ್ರೀಪಥ, ಧೀಮತಿಯರು ಅವರ  ಏಕಲವ್ಯ ಮಕ್ಕಳ ಸಾಹಿತ್ಯ ರಚನೆಯಾಗಿದೆ. ಸಂವರ್ಧಿನೀ, ಲೇಖ-ಲೋಕ-2, , ಧೀಮಂತ ಪತ್ರಕರ್ತ 'ತಾಯಿನಾಡು' ಪಿ.ಆರ್. ರಾಮಯ್ಯ, ರಂಗಲೇಖಕಿ, ಬಸ್ಸಿನೊಳಗೊಂದು ಪ್ರಜಾಪ್ರಭುತ್ವ ಮತ್ತು ಇತರ ನಾಟಕಗಳು” ಅವರ ಪ್ರಮುಖ ಸಂಪಾದನಾ ಕೃತಿಗಳಾಗಿವೆ. ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರದ (ಟಿಎಸ್ಸಾರ್) ಪ್ರಶಸ್ತಿ, 'ಆರ್ಯಭಟ ಪ್ರಶಸ್ತಿ, ಸ್ವರ ಲಿಪಿ ಪ್ರತಿಷ್ಠಾನದ ಲಿಪಿಪ್ರಾಜ್ಞೆ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಇತ್ಯಾದಿ ಲಭಿಸಿವೆ. ಇವರ ಜೀವನ ಸಾಧನೆ ಕುರಿತು ಈ ಕೃತಿಯು ವಿವರಿಸಿದೆ.

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books