ಲೇಖಕ ಆನಂದ್ ಎನ್ ಎಲ್ ಅವರ ಕೃತಿ ಜಯಪ್ರಕಾಶ್ ನಾರಾಯಣ .ಈ ಕೃತಿಯು ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ ನ ವಿಶ್ವಮಾನ್ಯರು ಜೀವನ ಚರಿತ್ರೆ ಸರಣಿಯಲ್ಲಿ ಮುದ್ರಣ ಕಂಡಿದೆ. ‘ಜೆಪಿ‘ ಎಂಬ ಸಂಕ್ಷಿಪ್ತ ನಾಮದಿಂದ ಪ್ರಸಿದ್ದರಾದ ಜಯಪ್ರಕಾಶ್ ನಾರಾಯಣ ಅವರು ಆಧುನಿಕ ಭಾರತದಲ್ಲಿ ‘ಸಂಪೂರ್ಣ ಕ್ರಾಂತಿ‘ಗೆ ಕರೆ ನೀಡಿದ ಲೋಕನಾಯಕರು. ಸಾರ್ವಜನಿಕ ಸೇವೆಗಾಗಿ ರಾಮೋನ್ ಮ್ಯಾಗಸ್ಸೇ ಪ್ರಶಸ್ತಿ ವಿಜೇತರು. ಭಾರತ ಸರ್ಕಾರವು ಮರಣೋತ್ತರ ‘ಭಾರತರತ್ನ‘ ಪ್ರಶಸ್ತಿಯನ್ನು ನೀಡಿದರೆ ಬಿಹಾರವು ತನ್ನ ಪಾಟ್ನ ವಿಮಾನ ನಿಲ್ದಾಣಕ್ಕೆ ಜೆಪಿಯವರ ಹೆಸರನ್ನೇ ಇಟ್ಟಿತು. ಅಂತಹ ಮಹಾನ್ ಸಾಧಕರ ಜೀವನ ಚಿತ್ರಣ ಈ ಕೃತಿಯಲ್ಲಿದೆ.
ಲೇಖಕ ಆನಂದ ಎನ್.ಎಲ್ ಅವರು ಪರಿಸರಕ್ಕೆ ಸಂಬಂಧಿಸಿದ ಸ್ವಯಂ ಸೇವಾ ಸಂಘಟನೆ, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಸಾಹಿತ್ಯಕ ಚಟುವಟಿಕೆಗಳಲ್ಲಿ ಆಸಕ್ತರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ಸ್ನಾತಕೋತ್ತರ ಪದವೀಧರರು. ಅನಂತಪುರದ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವೀಧರರು. ಜಯಪ್ರಕಾಶ ನಾರಾಯಣ, ಆಚಾರ್ಯ ವಿನೋಭಾ ಬಾವೆ, ಎಲ್. ನಾರಾಯಣರೆಡ್ಡಿ, ಸುಂದರಲಾಲ್ ಬಹುಗುಣ, ಬಾಬಾ ಆಮಟೆ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ...
READ MORE