ಸ್ವಾತಂತ್ಯ್ರ ಹೋರಾಟದಲ್ಲಿ ಕರ್ನಾಟಕ ರಾಜನಕೋಳೂರು

Author : ರಾಘವೇಂದ್ರ ಜಹಗೀರದಾರ

Pages 64

₹ 30.00




Year of Publication: 2022
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಜೆ.ಸಿ. ರಸ್ತೆ, ಬೆಂಗಳೂರು

Synopsys

ಪತ್ರಕರ್ತ ಹಾಗೂ ಲೇಖಕ ರಾಘವೇಂದ್ರ ಜಹಗೀರದಾರ ಅವರ ಕೃತಿ-‘ಸ್ವಾತಂತ್ಯ್ರ ಹೋರಾಟದಲ್ಲಿ ಕರ್ನಾಟಕದ ರಾಜನಕೋಳೂರು. ಯಾದಗಿರಿ ಜಿಲ್ಲೆಯಲ್ಲೇ ಶಿಲಾಗೋರಿಗಳಿರುವ ಏಕೈಕ ಪ್ರದೇಶ-ರಾಜನಕೋಳೂರು. ಐತಿಹಾಸಿಕ-ಪ್ರಾಗೈತಿಹಾಸಿಕತೆಯನ್ನು ಹೊಂದಿದ ಈ ಪ್ರದೇಶವು ದೇಶದ ಸ್ವಾತಂತ್ಯ್ರ ಹೋರಾಟದ ಕಾಲದಂದಲೂ ರಾಜಕೀಯವಾಗಿ ತನ್ನದೇ ಆದ ಪ್ರಭಾವವನ್ನು ಹೊಂದಿದೆ.  ದೇಶಕ್ಕೆ ಸ್ವಾತಂತ್ಯ್ರ ದೊರಕಿದ ಮೇಲೂ ಹೈದ್ರಾಬಾದ್ ನಿಜಾಮದ ದಬ್ಬಾಳಿಕೆಯನ್ನು ವಿರೋಧಿಸಿದ ಖ್ಯಾತಿಯೂ ಈ ಪ್ರದೇಶಕ್ಕಿದೆ. ವಿರೂಪಾಕ್ಷಪ್ಪ ಗೌಡರು ಎಂಬ ಹೆಸರಿನಿಂದ ಇಂದಿಗೂ ರಜಾಕಾರ ಹಾವಳಿ ವಿರುದ್ಧದ ಹೋರಾಟವನ್ನು ಗುರುತಿಸಲಾಗುತ್ತಿದೆ.   ನಿಜಾಮಶಾಹಿ ಹಾಗೂ ಬ್ರಿಟಿಷರ ವಿರುದ್ಧ ಏಕಕಾಲಕ್ಕೆ ಹೋರಾಟ ನಡೆಸಿದ ಕೀರ್ತಿ ವಿರೂಪಾಕ್ಷಪ್ಪ ಗೌಡರದ್ದು. ನಿಜಾಮನ ಆರ್ಥಿಕ ಶೋಷಣೆ, ರಾಜಕೀಯ ದಬ್ಬಾಳಿಕೆ, ಜನರನ್ನು ಶಿಕ್ಷಣದಿಂದ ದೂರವಿಡುವ ದಮನಕಾರಿ ಮನೋಭಾವವನ್ನು ವಿರೋಧಿಸಿದರು.  ಅವರು ಊರಲ್ಲೇ ಇರುವ ಕೆಲ ಕುತಂತ್ರಿಗಳಿಂದ ವಂಚನೆಗೊಳಗಾದರು. ಆದರೂ, ಎದೆಗುಂದದೇ ಹೋರಾಟ ಮುಂದುವರಿಸಿದ್ದರು. ಅವರು ಬಹುದೊಡ್ಡ ದಾನಿಗಳೂ ಹೌದು. ವಿದ್ಯಾರ್ಥಿ ಇದ್ದಾಗಲೇ ಆರ್ಯ ಸಮಾಜದೆಡೆಗೆ ಆಕರ್ಷಿತರಾಗಿದ್ದರು. ವಿರೂಪಾಕ್ಷಪ್ಪ ಗೌಡರಿಗೆ ಸಂದ ಗೌರವಗಳು, ಭಾವಚಿತ್ರಗಳ ಸಂಗ್ರಹ ಇತ್ಯಾದಿ ವಿಫುಲ ಮಾಹಿತಿ ಸಂಗ್ರಹದ ಕೃತಿ ಇದು. 

About the Author

ರಾಘವೇಂದ್ರ ಜಹಗೀರದಾರ
(01 January 1966)

ಲೇಖಕ ರಾಘವೇಂದ್ರ ಜಹಗೀರದಾರ ಅವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಗ್ರಾಮದವರು. ತಂದೆ ಶಾಮರಾವ್ ಜಹಾಗಿರದಾರ್. ತಾಯಿ ರಾಧಾಬಾಯಿ ಶಾಮರಾವ್ ಜಹಾಗಿರದಾರ್. 7ನೇ ತರಗತಿಯವರೆಗೆ ಕಾಮನಟಗಿಯಲ್ಲಿ ಓದಿ ನಂತರ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದರು. ಸ್ಥಳೀಯವಾಗಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿದ್ದು, ನೆಲ-ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಸ್ವಯಂ ಆಸಕ್ತಿಯಿಂದ  ಸಮಾಜ ಸೇವಾನಿರತರಾಗಿದ್ದಾರೆ. ಈ ಭಾಗದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ, ನಾರಾಯಣಪುರ ಆಣೆಕಟ್ಟು, ಕೃಷ್ಣಾ ಜಲಭಾಗ್ಯ ನಿಗಮ, ಕೃಷ್ಣಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳು  ನಡೆಯುತ್ತಿರುವಾಗ ನೀರು, ಭೂಮಿ, ಕಾಲುವೆ ಕುರಿತಂತೆ ಹಲವಾರು ಲೇಖನಗಳನ್ನು ಬರೆದು ಜಾಗೃತಿ ಮೂಡಿಸಿದ್ದರು.  ಕೃತಿಗಳು: ಸ್ವಾತಂತ್ಯ್ರ ಹೋರಾಟದಲ್ಲಿ ಕರ್ನಾಟಕದ ರಾಜನಕೊಳೂರು ...

READ MORE

Related Books