ವರನಟ ಡಾ. ರಾಜ್ ಕುಮಾರ್ ಹಾಗೂ ಅಭಿನೇತ್ರಿ ಲೀಲಾವತಿ ಅವರ ನಡುವೆ ಇದ್ದಿರಬಹುದಾದ ಸಂಬಂಧವನ್ನು ದಾಖಲಿಸುವ ಪ್ರಯತ್ನವನ್ನು ಪತ್ರಕರ್ತ ರವಿ ಬೆಳಗೆರೆ ಅವರು ಮಾಡಿದ್ದಾರೆ. ಲೀಲಾವತಿ ಅವರ ಆತ್ಮಕತೆ ಅದನ್ನು ರವಿ ಬೆಳಗೆರೆ ಅವರು ಬರೆದಿದ್ದಾರ. ಚಲನಚಿತ್ರ ನಟನಾಗಿ ಜನಪ್ರಿಯರಾಗಿದ್ದ ರಾಜ್ ಕುಮಾರ್ ಅವರ ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲುವ ಇರಾದೆ ಲೇಖಕರಿಗಿದೆ. ಪುಸ್ತಕದ ಶೀರ್ಷಿಕೆಯಲ್ಲಿಯೇ ಪುಸ್ತಕದ ಒಳಗಡೆ ಏನಿರಬಹುದು ಎಂಬ ಕುತೂಹಲ ಹಾಗೂ ಅದೇ ಇರಬಹುದು? ಎಂಬ ಅನುಮಾನಗಳೆರಡನ್ನೂ ಒಳಗೊಳ್ಳುವಂತೆ ರೂಪಿಸಲಾಗಿದೆ. ಲೀಲಾವತಿಯವರ ಪುತ್ರನ ಹೆಸರು ವಿನೋದ್ ಅನ್ನು ಶೀರ್ಷಿಕೆಯಲ್ಲಿ ‘ವಿನೋದ’ ಎಂದು ಪನ್ ಮಾಡಲಾಗಿದೆ. ಉಭಯ ಕಲಾವಿದರ ನಡುವಿನ ಪ್ರೀತಿ-ಪ್ರೇಮ-ಪ್ರಣಯದ ಸಂಬಂಧವನ್ನು ಪುಸ್ತಕ ದಾಖಲಿಸುತ್ತದೆ ಎಂದು ಸೂಚಿಸುವಂತೆ ಲೀಲಾವತಿ-ರಾಜ್ ಕುಮಾರ್ ಮತ್ತು ಪುಟ್ಟ ಬಾಲಕ (?)ನ ಚಿತ್ರವನ್ನ ಮುಖಪುಟದಲ್ಲಿ ಬಳಸಲಾಗಿದೆ. ಕುತೂಹಲದ ಮೊಟ್ಟೆ ಓದಿದ ನಂತರವೇ ಒಡೆಯುತ್ತದೆ. ಬಿಡುಗಡೆಗೆ ಮುನ್ನವೇ ಚರ್ಚೆ-ಚಾಲ್ತಿಗೆ ಬಂದಿದ್ದ ಇದು ಜನಪ್ರಿಯ ಧಾಟಿಯ ಪುಸ್ತಕ. ಕಥೆಯನ್ನು ಒಪ್ಪಲು ಅಥವಾ ನಿರಾಕರಿಸುವುದಕ್ಕಾಗಿ ಕಥಾನಾಯಕ ಈಗ ಜೀವಂತ ಇಲ್ಲ. ಹೀಗಾಗಿ ಕಥೆಯ ಸತ್ಯಾಸತ್ಯತೆಯು ಓದುಗನಿಗೆ ಬಿಟ್ಟ ವಿಷಯ. ಗಾಸಿಪ್ ರೂಪದಲ್ಲಿದ್ದ ಮಾತುಗಳನ್ನು ಅಕ್ಷರಕ್ಕೆ ಇಳಿಸಿ ಅದಕ್ಕೊಂದು ಖಚಿತತೆ ನೀಡುವ ಪ್ರಯತ್ನ ಮಾಡಲಾಗಿದೆ.
ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...
READ MORE