ಲೇಖಕ ಯು. ಎನ್. ಸಂಗನಾಳಮಠ ಅವರು ಸಂಕಲನಗೊಳಿಸಿದ ಕೃತಿ-ʻಕಾಡಿನ ಸಂತ ಪೂರ್ಣಚಂದ್ರ ತೇಜಸ್ವಿʼ ಕಾಡಿನ ವಿದ್ಯಮಾನಗಳು, ವಿಸ್ಮಯಗಳು, ನಿಗೂಢತೆಗಳನ್ನು ತಮ್ಮ ಸೂಕ್ಷ್ಮ ಬರಹಗಳ ಮೂಲಕ ಕನ್ನಡ ಸಾಕ್ಷರ ಲೋಕಕ್ಕೆ ನೀಡಿದ ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳ ಸಾಧನೆ ಕುರಿತು ಚಿತ್ರಣ ನೀಡಿದ ಕೃತಿ ಇದು. ಅವರನ್ನು ಕಾಡಿನ ಸಂತ ಎಂದೇ ಕರೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲೇಖಕರು ತೇಜಸ್ವಿ ಅವರ ವ್ಯಕ್ತಿತ್ವವವನ್ನು ಕಟ್ಟಿಕೊಟ್ಟಿದ್ದಾರೆ.
ಸಾಹಿತಿ ಯು.ಎನ್. ಸಂಗನಾಳಮಠ 1949 ಅಕ್ಟೋಬರ್ 07 ಮೂಲತಃ ಧಾರವಾಡದವರು. ಸಿರಿಗನ್ನಡ ವೇದಿಕೆ ಅಧ್ಯಕ್ಷರಾಗಿದ್ದು ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅನನ್ಯ, ಉದಯ ಕರ್ನಾಟಕ, ಧರ್ಮ ಸುಧಾ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಬರೆದ ಅನುಭವ. ಸುಮಾರು 40ಕ್ಕೂ ಹೆಚ್ಚು ಕೃತಿ ರಚಿಸಿದ್ದು ’ಕನ್ನಡ ಡಿಂಡಿಮ’ ಅವರ ಇತ್ತಿಚಿನ ಕೃತಿ. ಉಮೇಶ್ ಎಸ್. ಎನ್. ಅವರ ಕಾವ್ಯನಾಮ. ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ-2011