ಲೇಖಕ ಡಾ. ಆರ್.ಸಿ. ಹಿರೇಮಠ ಅವರು ಬರೆದ ಜೀವನಚರಿತ್ರೆ ಕೃತಿ ʻಉರಿ ಬರಲಿ- ಸಿರಿ ಬರಲಿʼ. ಪುಸ್ತಕದ ಪ್ರಕಾಶಕರ ನುಡಿಯಲ್ಲಿ, “ಉರಿಬರಲಿ, ಸಿರಿಬರಲಿ' ಆಧುನಿಕ ಸಾಹಿತ್ಯ ಮಾಲೆ'ಯ ಪ್ರಥಮಕೃತಿಯಾಗಿದೆ. ನಮ್ಮ ನಾಡಿನ ಘನತೆವೆತ್ತ ಕನ್ನಡ ಪ್ರಾಧ್ಯಾಪಕರೂ, ಗಣ್ಮವಿದ್ವಾಂಸರೂ, ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳೂ ಆಗಿರುವ ಡಾ. ಆರ್.ಸಿ.ಹಿರೇಮಠ ಅವರ ಆತ್ಮಚರಿತ್ರೆಯ ಮೂಲಕ ಈ ಮಾಲೆ ಪ್ರಾರಂಭವಾಗುತ್ತಲಿರುವುದು ಒಂದು ವಿಶೇಷವಾಗಿದೆ. ಈ ಕೃತಿ ಕೇವಲ ಒಬ್ಬ ವ್ಯಕ್ತಿಯ ಆತ್ಮಚರಿತ್ರೆಯಲ್ಲ, ಒಂದು ತಲೆಮಾರಿನ ಶಿಕ್ಷಣ-ಸಂಸ್ಕೃತಿಗಳ ಆತ್ಮಚರಿತ್ರೆ. “ಉಂಡವ ತೇಗುವಂತಾತ್ಮನ ಭಾವಿಸಿ ಕಂಡವನದ ಪೇಳಬೇಕು” ಎಂಬ ಮಾತಿಗೆ ನಿದರ್ಶನವೆಂಬಂತೆ ಈ ಕೃತಿ ಅಚ್ಚ ಅನುಭವಗಳ ಶಬ್ದರೂಪವಾಗಿದೆ” ಎಂದು ಹೇಳಿದ್ದಾರೆ.
ಭಾಷಾವಿಜ್ಞಾನ, ವಚನಗಳಿಗೆ ಸಂಬಂಧಿಸಿದಂತೆ ಪ್ರಮುಖ ಕೆಲಸ ಮಾಡಿದ ರುದ್ರಯ್ಯ ಚಂದ್ರಯ್ಯ ಹಿರೇಮಠ ಕನ್ನಡದ ಪ್ರಮುಖ ಸಂಶೋಧಕ ಆಗಿದ್ದರು. ರೋಣ ತಾಲ್ಲೂಕಿನ ಕುರುಡಗಿಯಲ್ಲಿ 1920ರ ಜನೆವರಿ 15ರಂದು ಜನಿಸಿದರು. ತಂದೆ ಚಂದ್ರಯ್ಯ- ತಾಯಿ ವೀರಮ್ಮ. ತಮ್ಮ ವಿದ್ಯಾಭ್ಯಾಸವನ್ನು ಧಾರವಾಡ, ಬೆಳಗಾವಿಯಲ್ಲಿ ಪೂರೈಸಿದರು. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ.ಪದವಿ (1940) ಗಳಿಸಿದರು. ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಅವರು ಪಿಎಚ್.ಡಿ ಪದವಿ (1951) ಗಳಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮುಖ್ಯಸ್ಥರಾಗಿ, ಕುಲಪತಿ (1975-1980)ಗಳಾಗಿದ್ದರು. ಕನ್ನಡ ವಿಭಾಗ ಇವರ ಕಾಲದಲ್ಲಿ ಕನ್ನಡ ಅಧ್ಯಯನ ಪೀಠವಾಯಿತು. ...
READ MORE