ಲಂಡನ್ ಮೂಲದ ಕವಿ ವಿಲಿಯಂ ಬ್ಲೇಕ್ ಅವರ ಬದುಕು ಬರಹದ ಕುರಿತು ಲೇಖಕ ಯು.ಆರ್. ಅನಂತಮೂರ್ತಿ ಬರೆದ ಕೃತಿ ಇದು.
ಬ್ಲೇಕ್ ಬಗೆಗೆ ಹೊಸ ರೀತಿಯ ಚರ್ಚೆಗಳು ಪ್ರಾರಂಭವಾಗಲು ದೊಡ್ಡ ಕೊಡುಗೆಯನ್ನು ಕೊಟ್ಟ ಕವಿ ಮತ್ತು ವಿಮರ್ಶಕ ಟಿ.ಎಸ್. ಎಲಿಯಟ್ ನ Blake ಲೇಖನದ ಮೊದಲ ಭಾಗವನ್ನು ಹೀಗೆ ಸಂಗ್ರಹಿಸಬಹುದು ಎನ್ನುತ್ತಾರೆ ಲೇಖಕ ಅನಂತಮೂರ್ತಿ. ಬ್ಲೇಕ್ ಕಾವ್ಯದಲ್ಲಿ ಒಂದು ವೈಶಿಷ್ಟ್ಯವಿರುವುದು ಹೌದು, ಅದು ವಿಚಿತ್ರವಾಗಿಯೂ ವಿಲಕ್ಷಣವಾಗಿಯೂ ಕಾಣುವುದೂ ಹೌದು. ಆದರೆ, ಆ ಬಗೆಯ ವಿಲಕ್ಷಣತೆ ಎಲ್ಲ ಶ್ರೇಷ್ಟ ಸಾಹಿತ್ಯದ ಒಂದು ಮೂಲ ಲಕ್ಷಣ. ವಿಲಕ್ಷಣತೆ ಎಂದು ಕಾಣುವ ಅದು ನಿಜಕ್ಕೂ ವಿಲಕ್ಷಣವಾದ ಪ್ರಾಮಾಣಿಕತೆ ಮಾತ್ರ. ಪ್ರಾಮಾಣಿಕತೆ ಎಂದರೆ ಬೆಚ್ಚಿಬೀಳುವ ಜಗತ್ತಿನಲ್ಲಿ ಪ್ರಾಮಾಣಿಕತೆ ವಿಲಕ್ಷಣವಾದ ಭಯವನ್ನು ಮೂಡಿಸುತ್ತದೆ. ಈ ರೀತಿಯ ಪ್ರಾಮಾಣಿಕತೆ ಅಪ್ರಿಯವೂ ಕಹಿಯೂ ಆದುದರಿಂದ ಇಡಿಯ ಜಗತ್ತು ಅದರ ವಿರುದ್ಧ ಸಂಚು ನಡೆಸುತ್ತಿರುತ್ತದೆ. ಬ್ಲೇಕ್ ನ ಕಾವ್ಯ ಎಲ್ಲ ಶ್ರೇಷ್ಠ ಕಾವ್ಯದಲ್ಲಿ ಕಂಡುಬರುವ ಅಪ್ರಿಯತೆಯ ಗುಣವನ್ನೇ ಹೊಂದಿರುವಂಥದು. ಬ್ಲೇಕ್ ನ ಅತಿದೊಡ್ಡ ಶಕ್ತಿ ಇರುವುದು ಆತ ವೈರುಧ್ಯಗಳನ್ನು ಮುಖಾಮುಖಿಯಾಗಿಸುವಲ್ಲಿ ಹಾಗೂ ಅವುಗಳ ಸಂಘಟನೆಯಿಂದ ಹೊಮ್ಮಿದ ಬೆಳಕಿನಿಂದ ಸಂಕೀರ್ಣ ಹಾಗೂ ಮೂಲಭೂತ ಸತ್ಯಗಳನ್ನು ಹೊಳೆಯಿಸುವಲ್ಲಿ. ಇಂಥಹ ಸೂಕ್ಷ್ಮ ಗ್ರಹಿಕೆಗಳ ಜೊತೆಗೆ ಬ್ಲೇಕ್ ಕಾವ್ಯದ ಸಾಧ್ಯತೆಗಳನ್ನು ಅನಂತಮೂರ್ತಿ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE