ಅಕ್ಷರ ವೃಕ್ಷ ಎಲ್. ನಾರಾಯಣ ರೆಡ್ಡಿ-ಲೇಖಕ ಕೆ.ಪಿ. ಸುರೇಶ್ ಅವರು ರಚಿಸಿದ ಕೃತಿ. ಎಲ್. ನಾರಾಯಣ ರೆಡ್ಡಿ ಅವರು ಕೃಷಿಕರು. ಆಧುನಿಕ ಕೃಷಿಯೆಡೆಗೆ ಒಲವು ತೋರಿದ್ದರೂ, ಹೆಚ್ಚುವರಿಯಾಗಿ ಇಳುವರಿ ಪಡೆಯುವ ಯಾವುದೇ ತಂತ್ರಜ್ಞಾನವನ್ನು ವಿರೋಧಿಸಲಿಲ್ಲ. ಆದರೆ, ಸಾಂಪ್ರದಾಯಿಕ ಕೃಷಿಯಲ್ಲಿಯ ಎಲ್ಲ ವೈಜ್ಞಾನಿಕ ಪದ್ಧತಿಗಳನ್ನು ಸಮರ್ಥಿಸಿಕೊಂಡ ಕೃಷಿಕರು. ಅವರ ಜೀವನ ಸಾಧನೆ ಕುರಿತು ಬರೆದ ಕೃತಿ.
ಕೆ.ಪಿ. ಸುರೇಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಸುಸ್ಥಿರ/ಸಾವಯವ ಕೃಷಿ, ಗಾಂಧೀ ವಿಚಾರಗಳು, ಸಾಹಿತ್ಯ- ವಿಭಿನ್ನ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಎರಡು ಕವನ ಸಂಕಲನ, ಎರಡು ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ, ಇವುಗಳ ಬಗ್ಗೆ ಸತತ ಚಿಂತನೆ ನಡೆಸುವ ಇವರು ತೆರೆಯ ಹಿಂದೆಯೇ 'ಅನಾಮಿಕ'ರಾಗಿ ಇರಲು ಬಯಸುವವರು. ಇವರ ಸಾಹಿತ್ಯ ಕೈಂಕರ್ಯ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ...
READ MOREಸಾವಯವ ಕೃಷಿ ಎಂದಾಕ್ಷಣ, ನಮ್ಮ ರಾಜ್ಯದಲ್ಲಿ ಅಷ್ಟೇಕೆ ಹೊರ ರಾಜ್ಯಗಳಲ್ಲೂ ,ಎಲ್.ನಾರಾಯಣ ರೆಡ್ಡಿಯವರನ್ನು ನೆನಪಿಸಿಕೊಳ್ಳದೆ ಮುಂದೆ ಹೋಗುವಂತಿಲ್ಲ. ಕೃಷಿಕರು ತಮ್ಮಷ್ಟಕ್ಕೆ ತಾವು ಹೇಗೆ ಸ್ವಾವಲಂಬಿಗಳಾಗಬಹುದು ಎಂಬುದನ್ನು ತೋರಿಸಿ ಕೊಟ್ಟವರು ಮತ್ತು ಮುಖ್ಯವಾಗಿ, ಅದನ್ನು ಭಾಷಣಗಳ ಮೂಲಕ ವಿವರಿಸಿ ಹೇಳಿದವರು. ಎಲ್. ನಾರಾಯಣ ರೆಡ್ಡಿ ಅವರ ಜೀವನ, ಸಾವಯವ ಪ್ರಯೋಗಗಳು, ದಿಟ್ಟತನ, ಇಂಗ್ಲಿಷ್‌ನಲ್ಲಿ ಭಾಷಣ ಮಾಡುವ ಕೌಶಲ ಮೊದಲಾದವುಗಳನ್ನು ಸಮಗ್ರವಾಗಿ ಪರಿಚಯಿಸಿಕೊಡುವ ಈ ಪುಸ್ತಕವು ಕನ್ನಡದ ಮಟ್ಟಿಗೆ ಒಂದು ಅನನ್ಯ ಗ್ರಂಥ. ಎಲ್, ನಾರಾಯಣ ರೆಡ್ಡಿಯವರು ಆರಂಭದಲ್ಲಿ ರಾಸಾಯನಿಕಗಳನ್ನು ಒಳಸಿ, ಆಧುನಿಕ ವಿಧಾನದ ಕೃಷಿಯಲ್ಲಿ ಸಾಕಷ್ಟು ಪ್ರಯೋಗ ನಡೆಸಿ, ಆ ವಿಧಾನದ ಅರೆ ಕೊಲೆಗಳನ್ನು ಗುರುತಿಸಿ, ಅದನ್ನು ತ್ಯಜಿಸಿ, ಸಾವಯವ ಕೃಷಿಗೆ ಮರಳಿದವರು. ಅದರಲ್ಲಿ ಸಾಕಷ್ಟು ಪ್ರಯೋಗಗಳನ್ನು ಸಹ ಮಾಡಿದವರು, ಅವರು ಅನುಸರಿಸಿದ ಕೃಷಿ ವಿಧಾನಗಳನ್ನು ಇತರರು ಗಮನಿಸಿ, ಅಧ್ಯಯನಕ್ಕೆ ಒಳಪಡಿಸಿದ ವಿವರಗಳು ಸಹ ಈ ಪುಸ್ತಕದಲ್ಲಿವೆ. ಈ ಗ್ರಂಥದ ಅಮೂಲ್ಯ ಭಾಗವೆಂದರೆ, ಎ.ನಾರಾಯಣ ರೆಡ್ಡಿಯವರು ಇಂಗ್ಲಿಷ್‌ನಲ್ಲಿ 1999ರಿಂದ 2014 ರ ಅವಧಿಯಲ್ಲಿ ಅಂಕಣ ರೂಪದಲ್ಲಿ ಬರೆದ ಲೇಖನಗಳ ಕನ್ನಡ ಅನುವಾದ. ಸುಮಾರು 125 ಪುಟಗಳಲ್ಲಿ (ಕ್ರೌನ್ 1/4 ಗಾತ್ರ) ಹರಡಿಕೊಂಡಿರುವ ಈ ಲೇಖನಗಳು ರೆಡ್ಡಿಯವರ ಕೃಷಿ ಪ್ರಯೋಗಗಳ ಸಾರವನ್ನು ಒಳಗೊಂಡು, ಕೃಷಿಯ ಕುರಿತ ಅ ವರ ಚಿಂತನೆಗಳನ್ನು ಒಳನೋಟಗಳನ್ನು ಬಿಂಬಿಸುತ್ತವೆ. ಕೃಷಿ ಕುರಿತಾಗಿ, ಕನ್ನಡದ ಒಂದು ಅಮೂಲ್ಯ ಗ್ರಂಥ.