ಎ.ಆರ್.ಕೃಷ್ಣಶಾಸ್ತ್ರಿ

Author : ಶಾಂತಾ ಕೆ

Pages 102

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಎ.ಆರ್.ಕೃಷ್ಣಶಾಸ್ತ್ರಿ' ಎಂಬುದು ಜೀವನಚರಿತ್ರೆಯ ಪುಸ್ತಕ. ಲೇಖಕಿ ಎ. ಶಾಂತಾ ಅವರು ರಚಿಸಿದ್ದಾರೆ. ‘ವಚನ ಭಾರತ’ ’ನಿರ್ಮಲ ಭಾರತೀ’ ಮುಂತಾದ ಗ್ರಂಥಗಳನ್ನು ರಚಿಸಿ ಕನ್ನಡಕ್ಕಾಗಿ ಅವಿರತವಾಗಿ ದುಡಿದ ’ಕನ್ನಡ ಕುಲ ಸಾರಥಿ’. ಕನ್ನಡವೆಂದರೆ ತಿರಸ್ಕಾರವಿದ್ದ ಕಾಲದಲ್ಲಿ ಅದರ ಹಿರಿಮೆಯನ್ನು ಹೆಚ್ಚಿಸಿದ ಸಾಹಿತಿ. ದೊಡ್ಡ ಬರಹಗಾರರಾದಂತೆ ಬಹು ಹಿರಿಯ ಬಾಳು ಬಾಳಿದ ಚೇತನ ಎ.ಆರ್.ಕೃಷ್ಣಶಾಸ್ತ್ರಿ ಎಂದು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕನ್ನಡದತ್ತ ದೇಶ ತಿರುಗಿ ನೋಡುವಂತೆ ಮಾಡಿದ ಬಗೆ, ಕನ್ನಡದ ಮೇಲಿನ ಪ್ರೀತಿಯ ಹಿಂದಿನ ಕಥನಗಳೆಲ್ಲವನ್ನೂ ಲೇಖಕರು ಈ ಪುಸ್ತಕದಲ್ಲಿ ಅಚ್ಚುಕಟ್ಟಾಗಿ ವಿವರಿಸಿದ್ದಾರೆ.

About the Author

ಶಾಂತಾ ಕೆ

ಲೇಖಕಿ ಶಾಂತಾ ಕೆ ಅವರು ಹೋಮಿಯೋಪಥಿ ವೈದ್ಯರು. ಎಂ.ಎ. ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವೀಧರರು. ತಂದೆ ಎ.ಆರ್. ಕೃಷ್ಣಶಾಸ್ತ್ರಿ,ತಾಯಿ ವೆಂಕಟಲಕ್ಷ್ಮಮ್ಮ .28-10-1933 ರಂದು ಜನನ.  ಕೃತಿಗಳು: ಭಾಗ್ಯೋದಯ, ಎರಡು ಹೂ, ಬೆಳಕಿನೆಡೆಗೆ, ಸ್ಮತಿಪುಷ್ಪ, ಬೆರೆಯದ ಮನ, ಅಹಲ್ಯ ಗೃಹವಿಜ್ಞಾನ (ಕಾದಂಬರಿಗಳು)  ಮುತ್ತುರತ್ನ ಮತ್ತು ಇತರ ಕಥೆಗಳು -1959, (ಕಥಾ ಸಂಕಲನ)ಎ.ಆರ್. ಕೃಷ್ಣಶಾಸ್ತಿ-1973) ಸಂಭಾವನಾ ಗ್ರಂಥ ಪ್ರಕಟಿಸಿದ್ದಾರೆ. ...

READ MORE

Related Books