ಹಿರಿಯ ಲೇಖಕ ಜಿ.ಎಸ್. ಭಟ್ ಅವರು ಭಾರತದ ಮೊದಲ ಗೃಹಮಂತ್ರಿ ಸರ್ದಾರ ವಲ್ಲಭಬಾಯಿ ಪಟೇಲರ ಜೀವನ ಚಿತ್ರವನ್ನು ಬರೆದ ಕೃತಿ. ಉಕ್ಕಿನ ಮನುಷ್ಯ ಎಂಬ ಬಿರುದು ಇವರ ಗಟ್ಟಿ ವ್ಯಕ್ತಿತ್ವದ ಸೂಚಕವಾಗಿದೆ. ಗೃಹಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಭಾರತದಲ್ಲಿಯ ನೂರೆಂಟು ಸಣ್ಣ ಸಣ್ಣ ಸಂಸ್ಥಾನಗಳನ್ನು ವಿಲೀನಗೊಳಿಸುವುದು ದೊಡ್ಡ ಸವಾಲಾಗಿತ್ತು. ಒಂದೊಂದೇ ಸವಾಲಿನ ಸಮಸ್ಯೆಯನ್ನು ಪೂರ್ಣಗೊಳಿಸಿ ನಿವಾರಿಸುತ್ತಾ ಬಂದರು. ಹೀಗಾಗಿ, ಅಖಂಡ ಭಾರತದ ಕಲ್ಪನೆಗೆ ಕಾರಣವಾಯಿತು. ಹೈದ್ರಾಬಾದ್ ನಿಜಾಮನು ಭಾರತದಲ್ಲಿ ವಿಲೀನಗೊಳ್ಳಲು ನಿರಾಕರಿಸಿದಾಗ ಅಲ್ಲಿಯ ರಜಾಕಾರರ ಮೇಲೆ ಮಿಲಿಟರಿ ಪಡೆಯ ದಾಳಿ ನಡೆಸಿ, ಕೊನೆಗೂ ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸಿದರು. ಇಂತಹ ದೇಶಪ್ರೇಮಿಯ ಕುರಿತು ಹಾಗೂ ವೈವಿಧ್ಯತೆಯನ್ನು ಗೌರವಿಸಿದ ವ್ಯಕ್ತಿತ್ವದ ಸರ್ದಾರರ ಕುರಿತು ಚಿತ್ರಣ ನೀಡುವ ಕೃತಿ ಇದು.
ಹಿರಿಯ ಲೇಖಕ ಜಿ.ಎಸ್ ಭಟ್ (ಮೈಸೂರು). 1943, ಮೇ 6 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜನನ. ತಂದೆ ಸುಬ್ಬರಾಯ ಭಟ್, ತಾಯಿ ಸರಸ್ವತಿ. ಕಲಾವಿದರಾಗಿರುವ ಜಿ.ಎಸ್.ಭಟ್ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಸಾಹಿತಿ ಪ್ರೊ.ದೇಜಗೌ ಅವರಿಂದ ಪ್ರೇರಿತರಾಗಿ 1969ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗಕ್ಕೆ ವಿಶ್ವಕೋಶದ ಸಂಪಾದಕರಾಗಿ ಸೇರಿದರು. ಅಷ್ಟೇ ಅಲ್ಲದೆ ವಿಶ್ವವಿದ್ಯಾನಿಲಯದೊಂದಿಗೆ 33 ವರ್ಷಗಳ ಅವಧಿಯಲ್ಲಿ ವಿಶ್ವಕೋಶದ 14 ಸಂಪುಟಗಳನ್ನು ಹೊರತಂದ ಕೀರ್ತಿಯು ಅವರಿಗೆ ಸಲ್ಲುತ್ತದೆ. ನಿವೃತ್ತಿಯ ನಂತರವೂ ಭಟ್ ಕನ್ನಡ ವಿಶ್ವಕೋಶದ ಕೆಲಸವನ್ನು ಮುಂದುವರೆಸಿದರು. ಯಕ್ಷಗಾನ ಮತ್ತು ಬಯಲಾಟ ಸೇರಿದಂತೆ 75 ...
READ MORE