‘ಗುಲ್ಜಾರಿಲಾಲ್ ನಂದಾ' ಅವರ ಜೀವನ ಚರಿತ್ರೆಯ ಕೃತಿ ಇದು. ಲೇಖಕ ಟಿ.ಎಂ. ಸುಬ್ಬರಾಯ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ, ಎರಡು ಬಾರಿ ಭಾರತದ ಹಂಗಾಮಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಬಗೆ, ಕೇಂದ್ರ ಸಚಿವರಾಗಿ ಮಾಡಿದ ಸೇವೆಗಳು, ಭಾರತ ರತ್ನ ಪ್ರಶಸ್ತಿ ವಿಜೇತರಾದ ಹಿಂದಿನ ಇತಿಹಾಸ, ಬಾಲ್ಯ ಜೀವನ, ಕೊನೆಯ ದಿನಗಳು, ಲಾಲ್ ಬಹಾದ್ದೂರ ಶಾಸ್ತ್ರಿ ಅವರೊಂದಿಗಿನ ನಂಟು ಹೀಗೆ ಗುಲ್ಜಾರಿಲಾಲ್ ನಂದಾ ಅವರ ಜೀವನದ ಹಲವು ಆಯಾಮಗಳ ಏಳು-ಬೀಳುಗಳನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಲೇಖಕ ಟಿ.ಎಂ. ಸುಬ್ಬರಾಯರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭಾರಂಗಿ ಹೋಬಳಿಯ ಬಣ್ಣೂ ಮನೆ(ಬಾನುಮನೆ) ಗ್ರಾಮದ ತೆಂಕೋಡು ಮನೆಯಲ್ಲಿ. ತಂದೆ- ಟಿ.ವಿ. ಮಹಾಬಲಗಿರಿಯಪ್ಪ, ತಾಯಿ- ಫಣಿಯಮ್ಮ. ಪ್ರಾರಂಭಿಕ ಶಿಕ್ಷಣವನ್ನು ತುಮರಿ, ಹಿರೇ ಭಾಸ್ಕರದಲ್ಲಿ ಮತ್ತು ಪ್ರೌಢಶಾಲಾಭ್ಯಾಸವನ್ನು ಸಾಗರದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದರು. ಆನಂತರ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಿಂದ ಪದvವೀಧರರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ಬೆಳಗಾವಿಯ ಸರಕಾರಿ ಶಿಕ್ಷಣ ಕಾಲೇಜಿನಿಂದ ವೃತ್ತಿ ಶಿಕ್ಷಣ ಪದವೀಧರರು. ಶಿರಸಿಯ ಆವೇ ಮರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಅಲ್ಲಿಯೇ . ನಿವೃತ್ತರಾದರು. ಸುಮಾರು ಆರುನೂರಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ಬರೆದಿದ್ದು ...
READ MORE