`ಶಾರದನಂದರು' ಜೀವನಚರಿತ್ರೆಯ ಕೃತಿ ಇದು. ಲೇಖಕ ಸ್ವಾಮಿ ಜಗತಾತ್ಮನಂದ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ, ಶ್ರೀ ರಾಮಕೃಷ್ಣರ ಪ್ರಮುಖ ಶಿಷ್ಯರಲ್ಲಿ ಒಬ್ಬರು. ಮಹಾಮಾತೆ ಶ್ರೀ ಶಾರದಾದೇವಿಯವರ ಏಕ ನಿಷ್ಠ ಸೇವಕರು. ಜೀವ ಸೇವೆ ಮಾಡಬೇಕೆಂದು ಬೋಧಿಸಿದ ವಿವೇಕಾನಂದರ ಸಂದೇಶದ ಪಾಲನೆ ಮತ್ತು ಪ್ರಚಾರದಲ್ಲಿ ಅವರಿಗೆ ಬಲಗೈಯಂತಿದ್ದವರು. ಶ್ರೀ ರಾಮಕೃಷ್ಣ ಲೀಲೆ ಪ್ರಸಂಗ ಎಂಬ ಹೆಸರಿನ ಅತ್ಯಪೂರ್ವ ಗ್ರಂಥ ರಚನೆಯ ಮೂಲಕ ಸನಾತನ ಧರ್ಮದ ಮರ್ಮವನ್ನು ತಿಳಿಸಿದವರು. ಕ್ಷಮೆ, ಕರುಣೆ, ಸಹಿಷ್ಣುತೆಯ ಮೂರ್ತಿ, ಸರ್ವಭೂತಗಳಲ್ಲೂ ಭಗವಂತನನ್ನು ಕಂಡ ಮಹಿಮರು ಎಂದು ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಮೈಸೂರಿನ ರಾಮಕೃಷ್ಣಾಶ್ರಮ ಶಾರದಾಶ್ರಮದ ಸ್ವಾಮಿ ಜಗದಾತ್ಮಾನಂದರು ತಮ್ಮ ‘ಬದುಕಲು ಕಲಿಯಿರಿ’ ಎಂಬ ಪುಸ್ತಕದಿಂದ ಪ್ರಸಿದ್ಧರು. 1881ರಲ್ಲಿ ಪ್ರಕಟಿತ ಈ ಕೃತಿಯು ಹತ್ತು ಹಲವು ಭಾಷೆಗಳಲ್ಲಿ ಅನುವಾದಗೊಂಡು, 3 ಲಕ್ಷಕ್ಕೂ ಅಧಿಕ ಕೃತಿಗಳು ಮಾರಾಟವಾಗಿ ಕನ್ನಡ ಪುಸ್ತಕ ಪ್ರಕಾಶನದಲ್ಲಿ ದಾಖಲೆ ನಿರ್ಮಿಸಿದೆ. ಬದುಕಲು ಕಲಿಯಿರಿ- ಈ ಪುಸ್ತಕವು ಏಳು ಸುದೀರ್ಘ ಅಧ್ಯಾಯಗಳನ್ನು ಒಳಗೊಂಡಿದೆ. 2018ರ ನವೆಂಬರ 15 ರಂದು ನಿಧನರಾದರು. ...
READ MORE